ADVERTISEMENT

ಯೂತ್ ಬಾಕ್ಸಿಂಗ್‌: ಪ್ರಿ ಕ್ವಾರ್ಟರ್‌ ಫೈನಲ್‌ಗೆ ಪೂನಂ, ವಿಂಕಾ

ಪಿಟಿಐ
Published 14 ಏಪ್ರಿಲ್ 2021, 13:04 IST
Last Updated 14 ಏಪ್ರಿಲ್ 2021, 13:04 IST
ಎಐಬಿಎ ಅಧ್ಯಕ್ಷ ಉಮರ್ ಕ್ರೆಮ್ಲೆವ್ ಅವರೊಂದಿಗೆ ಪೂನಮ್ ಮತ್ತು ವಿಂಕಾ –ಪಿಟಿಐ ಚಿತ್ರ
ಎಐಬಿಎ ಅಧ್ಯಕ್ಷ ಉಮರ್ ಕ್ರೆಮ್ಲೆವ್ ಅವರೊಂದಿಗೆ ಪೂನಮ್ ಮತ್ತು ವಿಂಕಾ –ಪಿಟಿಐ ಚಿತ್ರ   

ನವದೆಹಲಿ: ಭಾರತದ ಬಾಕ್ಸರ್‌ಗಳು ಪೋಲೆಂಡ್‌ನ ಕೀಲ್ಸೆಯಲ್ಲಿ ನಡೆಯುತ್ತಿರುವ ಯೂತ್ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಆರಂಭ ಕಂಡಿದ್ದಾರೆ. ಮಹಿಳೆಯರ 57 ಕೆಜಿ ವಿಭಾಗದಲ್ಲಿ ಪೂನಂ ಮತ್ತು ಪುರುಷರ 60 ಕೆಜಿ ವಿಭಾಗದಲ್ಲಿ ವಿಂಕಾ ಅವರು ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಕೊಲಂಬಿಯಾದ ವಲೇರಿಯಾ ಮೆಂಡೋಜಾ ಅವರನ್ನು 5–0ಯಿಂದ ಪೂನಂ ಮಣಿಸಿದರೆ ರಷ್ಯಾದ ದಾರಿಯಾ ಪಂಟೆಲೀವಾ ವಿರುದ್ಧ ವಿಂಕಾ 3–2ರಲ್ಲಿ ಗೆಲುವು ಸಾಧಿಸಿದರು. ಪೂನಂ ಮುಂದಿನ ಬೌಟ್‌ನಲ್ಲಿ ಹಂಗರಿಯ ಬೀಟಾ ವಾರ್ಗ ಎದುರು ಸೆಣಸಲಿದ್ದು ಕಜಕಸ್ತಾನದ ಜುಲ್ಡಿಜ್ ಶಯಾಕ್‌ಮೆಟೋವ ಅವರನ್ನು ವಿಂಕಾ ಎದುರಿಸುವರು.

ತಲಾ ಹತ್ತು ‍ಪುರುಷ ಮತ್ತು ಮಹಿಳಾ ಬಾಕ್ಸರ್‌ಗಳನ್ನು ಭಾರತ ಕಣಕ್ಕೆ ಇಳಿಸಿದ್ದು ಮಹಿಳೆಯರ ವಿಭಾಗದಲ್ಲಿ 2019ರ ಏಷ್ಯನ್ ಯೂತ್ ಚಾಂಪಿಯನ್‌ ನೈರೆಮ್ ಬೇಬಿರೋಜಿಸಾನ ಚಾನು (51 ಕೆಜಿ), ಸನಾಮಾಚ ಚಾನು (75 ಕೆಜಿ), ಅಲ್ಫಿಯಾ ಪಠಾಣ್‌ (+81 ಕೆಜಿ), ಖೇಲೊ ಇಂಡಿಯಾ ಕ್ರೀಡಾಕೂಟದಲ್ಲಿ ಮೂರು ಬಾರಿ ಚಿನ್ನದ ಪದಕ ಗೆದ್ದಿರುವ ಅರುಂಧತಿ ಚೌಧರಿ (69 ಕೆಜಿ), ಗೀತಿಕಾ (48 ಕೆಜಿ), ಆರ್ಷಿ ಖನಂ (54 ಕೆಜಿ), ನಿಶಾ (64 ಕೆಜಿ) ಮತ್ತು ಖುಷಿ (81 ಕೆಜಿ) ಸ್ಪರ್ಧಿಸುತ್ತಿದ್ದಾರೆ.

ADVERTISEMENT

ಪುರುಷರ ವಿಭಾಗದಲ್ಲಿ ಸ್ಪರ್ಧಿಸುತ್ತಿರುವವರ ಪೈಕಿ ಏಷ್ಯನ್ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದ ಅಂಕಿತ್ ನರ್ವಾಲ್‌ (64 ಕೆಜಿ) ಮತ್ತು ಏಷ್ಯನ್ ಜೂನಿಯರ್ ಚಾಂಪಿಯನ್‌ ಚೊಂಗ್ತಂ ಬಿಸ್ವಮಿತ್ರ (49 ಕೆಜಿ) ‍ಪ್ರಮುಖರಾಗಿದ್ದು ವಿಕಾಸ್ (52 ಕೆಜಿ), ಸಚಿನ್(56 ಕೆಜಿ), ಆಕಾಶ್‌ ಗೋರ್ಖಾ (60 ಕೆಜಿ), ಸುಮಿತ್(69 ಕೆಜಿ), ಮನೀಷ್ (75 ಕೆಜಿ), ವಿನೀತ್(81 ಕೆಜಿ), ವಿಶಾಲ್ ಗುಪ್ತಾ(91 ಕೆಜಿ) ಮತ್ತು ಜುಂಗೂ(+91 ಕೆಜಿ) ಅವರೂ ಕಣಕ್ಕೆ ಇಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.