ADVERTISEMENT

ಶೂಟಿಂಗ್ ಕ್ರೀಡಾಪಟುಗಳಿಗೆ ಲಸಿಕೆ

​ಪ್ರಜಾವಾಣಿ ವಾರ್ತೆ
Published 6 ಮೇ 2021, 15:57 IST
Last Updated 6 ಮೇ 2021, 15:57 IST
ಭಾರತ ಶೂಟಿಂಗ್ ತಂಡ
ಭಾರತ ಶೂಟಿಂಗ್ ತಂಡ   

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ಗೆ ತೆರಳಲು ಸಿದ್ಧತೆ ನಡೆಸಿರುವ ಭಾರತದ ಶೂಟಿಂಗ್‌ಪಟುಗಳು, ಕೋಚ್‌ಗಳು ಮತ್ತು ಅಧಿಕಾರಿಗಳಿಗೆ ಗುರುವಾರ ಕೋವಿಡ್ ತಡೆ ಲಸಿಕೆಗಳನ್ನು ನೀಡಲಾಯಿತು.

ಇದೇ 11ರಂದು ಶೂಟಿಂಗ್ ತಂಡವು ಕ್ರೊವೆಷ್ಯಾದ ಝಾಗ್ರೇಬ್‌ನಲ್ಲಿ ನಡೆಯಲಿರುವ ಯುರೋಪಿಯನ್ ಚಾಂಪಿಯನ್‌ಷಿಷ್‌ನಲ್ಲಿ ಭಾಗವಹಿಸಲು ತೆರಳಲಿದ್ದಾರೆ. ಅದಕ್ಕೂ ಮುನ್ನ ಲಸಿಕೆ ಪಡೆದುಕೊಂಡಿದ್ದಾರೆ. ಮೇ 20ರಿಂದ ಜೂನ್ 6ರವರೆಗೆ ಚಾಂಪಿಯನ್‌ಷಿಪ್ ನಡೆಯಲಿದೆ.

ನಂತರ ಕೆಲವು ದಿನಗಳವರೆಗೆ ಅಲ್ಲಿಯೇ ತರಬೇತಿಯಲ್ಲಿ ಪಾಲ್ಗೋಳ್ಳುವರು. ಜುಲೈ 23ರಿಂದ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಝಾಗ್ರೇಬ್‌ನಿಂದ ನೇರವಾಗಿ ತೆರಳುವರು. ಒಲಿಂಪಿಕ್ಸ್‌ನಲ್ಲಿ ಒಟ್ಟು 15 ಜನರ ತಂಡವು ಸ್ಪರ್ಧಿಸಲಿದೆ.

ADVERTISEMENT

‘ಎಲ್ಲ ಶೂಟಿಂಗ್ ಪಟುಗಳು ಲಸಿಕೆ ಹಾಕಿಸಿಕೊಂಡಿದ್ದಾರೆ. ಕೆಲವರು ದೆಹಲಿಯಲ್ಲಿ ಮತ್ತು ಇನ್ನೂ ಕೆಲವರು ತಮ್ಮ ತವರೂರುಗಳಲ್ಲಿ ಲಸಿಕೆ ತೆಗೆದುಕೊಂಡಿದ್ದಾರೆ‘ ಎಂದು ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆಯ ಮೂಲಗಳು ಖಚಿತಪಡಿಸಿವೆ.

ಭಾರತ ತಂಡದಲ್ಲಿರುವ ಕೆಲವು ಶೂಟರ್‌ಗಳು ಹೋದ ತಿಂಗಳು ಮೊದಲ ಡೋಸ್‌ ತೆಗೆದುಕೊಂಡಿದ್ದರು. ಅದರಲ್ಲಿ ಮನು ಭಾಕತ್ ಮತ್ತು ಅಂಜುಮ್ ಮೌದ್ಗಿಲ್, ಕೋಚ್‌ಗಳಾದ ಸಮರೇಶ್ ಜಂಗ್, ಸುಮಾ ಶಿರೂರ್ ಮತ್ತು ದೀಪಾಲಿ ದೇಶಪಾಂಡೆ ಅವರೂ ಅದರಲ್ಲಿದ್ದರು.

ಮನು ಭಾಕರ್ ಅವರು ಹರಿಯಾಣದ ಝಾಜರ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡಿದ್ದರು.

ಕ್ರೊವೇಷ್ಯಾಕ್ಕೆ ತೆರಳಲು ತಂಡಕ್ಕೆ ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.