ADVERTISEMENT

ಶೂಟಿಂಗ್‌ | 25 ಮೀ. ಸ್ಟ್ಯಾಂಡರ್ಡ್‌ ಪಿಸ್ತೂಲ್‌: ಅಮನ್‌ದೀಪ್‌ಗೆ ಚಿನ್ನ

ಪಿಟಿಐ
Published 23 ಆಗಸ್ಟ್ 2023, 14:42 IST
Last Updated 23 ಆಗಸ್ಟ್ 2023, 14:42 IST
ಶೂಟಿಂಗ್‌ 
ಶೂಟಿಂಗ್‌    

ಬಾಕು: ಅಮನ್‌ಪ್ರೀತ್‌ ಸಿಂಗ್‌, ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವ ಚಾಂಪಿಯನ್‌ಷಿಪ್‌ನ ಪುರುಷರ 25 ಮೀ. ಸ್ಟ್ಯಾಂಡರ್ಡ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಬುಧವಾರ ಚಿನ್ನ ಗೆದ್ದುಕೊಂಡರು. ಇದು ಭಾರತಕ್ಕೆ ಈ ಕೂಟದಲ್ಲಿ ಐದನೇ ಚಿನ್ನ. ಇದೇ ಸ್ಪರ್ಧೆಯ ತಂಡ ವಿಭಾಗದಲ್ಲಿ ಭಾರತದ ವನಿತೆಯರು ಕಂಚಿನ ಪದಕ ಗೆದ್ದರು.

ಭಾರತ ಐದು ಚಿನ್ನದ ಪದಕಗಳ ಜೊತೆ ನಾಲ್ಕು ಕಂಚಿನ ಪದಕಗಳನ್ನೂ ಗೆದ್ದುಕೊಂಡಿದೆ. ಪದಕಪಟ್ಟಿಯಲ್ಲಿ ಚೀನಾ ನಂತರ ಎರಡನೇ ಸ್ಥಾನದಲ್ಲಿದೆ. ಚೀನಾ ಗೆದ್ದಿರುವ 24 ಪದಕಗಳಲ್ಲಿ 13 ಸ್ವರ್ಣ ಪದಕಗಳಿವೆ.

ಸ್ಟ್ಯಾಂಡರ್ಡ್‌ ಪಿಸ್ತೂಲ್ ಸ್ಪರ್ಧೆಯಲ್ಲಿ ಅಮನ್‌ದೀಪ್‌ 577 ಸ್ಕೋರ್‌ ಕಲೆಹಾಕಿದರು. ಇದು ಬೆಳ್ಳಿಯ ಪದಕ ಗೆದ್ದ ಕೊರಿಯಾದ ಲೀ ಗುನ್‌ಹ್ಯೆಕ್ (574) ಅವರಿಗಿಂತ ಮೂರು ಸ್ಕೋರ್‌ ಅಧಿಕ. ಫ್ರಾನ್ಸ್‌ನ ಕೇವಿನ್ ಚಪೊನ್‌ (564) ಕಂಚಿನ ಪದಕ ಗೆದ್ದುಕೊಂಡರು.

ADVERTISEMENT

ಪುರುಷರ ಟೀಮ್‌ ವಿಭಾಗದಲ್ಲಿ ಹರ್ಷ್‌ ಗುಪ್ತಾ, ಅಕ್ಷಯ್‌ ಜೈನ್‌ ಮತ್ತು ಅಮನ್‌ಪ್ರೀತ್ ಅವರನ್ನೊಳಗೊಂಡ ತಂಡ ಸ್ವಲ್ಪದರಲ್ಲೇ ಕಂಚಿನ ಪದಕ ಕಳೆದುಕೊಂಡಿತು.  ಚೀನಾ, ಜರ್ಮನಿ ಮತ್ತು ಕೊರಿಯಾ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದವು.

ಮಹಿಳೆಯರ ವಿಭಾಗದಲ್ಲಿ ಯಾರೂ ವೈಯಕ್ತಿಕ ಪದಕ ಗೆಲ್ಲಲಾಗಿದ್ದರೂ, ತಂಡ ವಿಭಾಗದಲ್ಲಿ ಕಂಚಿನ ಪದಕ ಕೊರಳಿಗೆ ಹಾಕಿಕೊಂಡಿತು. ಟಿಯಾನಾ (538), ಯಶಿತಾ ಶೋಕಿನ್‌ (536) ಮತ್ತು ಕೃತಿಕಾ ಶರ್ಮಾ (527) ಅವನ್ನೊಳಗೊಂಡ ತಂಡ ಒಟ್ಟು 1,601 ಸ್ಕೋರ್‌ನೊಡನೆ ಕಂಚಿನ ಪದಕ ಗಳಿಸಿತು. ಚೀನಾ ಚಿನ್ನದ ಪದಕ ಬಾಚಿಕೊಂಡರೆ, ಅಜರ್‌ಬೈಜಾನ್‌ಗೆ ರಜತ ಪದಕ ದಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.