ADVERTISEMENT

ಒಲಿಂಪಿಕ್ಸ್ ಅರ್ಹತಾ ಬಾಕ್ಸಿಂಗ್‌ ಆತಿಥ್ಯಕ್ಕೆ ಭಾರತ

ಪಿಟಿಐ
Published 23 ಜನವರಿ 2020, 19:45 IST
Last Updated 23 ಜನವರಿ 2020, 19:45 IST

ನವದೆಹಲಿ: ಒಲಿಂಪಿಕ್ಸ್‌ ಅರ್ಹತಾ ಬಾಕ್ಸಿಂಗ್ ಟೂರ್ನಿಗೆ ಆತಿಥ್ಯ ವಹಿಸಲು ಭಾರತ ಉತ್ಸಾ ತೋರಿಸಿದೆ. ಚೀನಾದ ವುಹಾನ್‌ನಲ್ಲಿ ಮುಂದಿನ ತಿಂಗಳು ಟೂರ್ನಿಯನ್ನು ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ವೈರಸ್‌ ಆತಂಕ ಸೃಷ್ಟಿಸಿರುವ ಕಾರಣ ಅಲ್ಲಿ ಟೂರ್ನಿ ನಡೆಸದೇ ಇರಲು ನಿರ್ಣಯಿಸಲಾಗಿದೆ.

ಫೆಬ್ರುವರಿ ಮೂರರಿಂದ 15ರ ವರೆಗೆ ಟೂರ್ನಿ ನಡೆಯಲಿದೆ. ಟೂರ್ನಿಯನ್ನು ಬೇರೆ ಯಾವುದೇ ರಾಷ್ಟ್ರಕ್ಕೆ ಸ್ಥಳಾಂತರಿಸುವ ಯೋಚನೆ ಇದ್ದರೆ ಆತಿಥ್ಯ ವಹಿಸಲು ಭಾರತ ಸಜ್ಜು ಎಂದು ಭಾರತ ಬಾಕ್ಸಿಂಗ್ ಫೆಡರೇಷನ್ ತಿಳಿಸಿದೆ.

‘ಟೂರ್ನಿ ಆಯೋಜಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ಕ್ರೀಡಾ ಸಂಕೀರ್ಣದ ಕೆ.ಡಿ.ಜಾಧವ್ ಒಳಾಂಗಣ ಕ್ರೀಡಾಂಗಣ ಇದಕ್ಕಾಗಿ ಸಜ್ಜಾಗಿದೆ’ ಎಂದು ಫೆಡರೇಷನ್ ಅಧ್ಯಕ್ಷ ಅಜಯ್ ಸಿಂಗ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.