ADVERTISEMENT

ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌: ಭಾರತಕ್ಕೆ ಸತತ ಎರಡನೇ ಜಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 14:40 IST
Last Updated 7 ಅಕ್ಟೋಬರ್ 2025, 14:40 IST
ಬ್ಯಾಡ್ಮಿಂಟನ್‌
ಬ್ಯಾಡ್ಮಿಂಟನ್‌   

ಗುವಾಹಟಿ: ಆತಿಥೇಯ ಭಾರತ ತಂಡವು ಇಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್‌ ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡನೇ ಜಯ ದಾಖಲಿಸಿತು.

ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರದಲ್ಲಿ ನಡೆಯುತ್ತಿರುವ ಟೂರ್ನಿಯ ಎರಡನೇ ದಿನವಾದ ಮಂಗಳವಾರ ನಡೆದ ‘ಎಚ್‌’ ಗುಂಪಿನ ಪಂದ್ಯದಲ್ಲಿ ಭಾರತ ತಂಡವು 45-27, 45-21ರಿಂದ (2–0) ಶ್ರೀಲಂಕಾವನ್ನು ಮಣಿಸಿ, ಮಿಶ್ರ ತಂಡ ವಿಭಾಗದಲ್ಲಿ ನಾಕೌಟ್‌ಗೆ ಹತ್ತಿರವಾಯಿತು.

ಎರಡನೇ ಶ್ರೇಯಾಂಕದ ಭಾರತ ತಂಡವು ಸೋಮವಾರ ನೇಪಾಳವನ್ನು ಮಣಿಸಿತ್ತು. ಶ್ರೀಲಂಕಾ ತಂಡವು ತನ್ನ ಮೊದಲ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವನ್ನು ಸೋಲಿಸಿತ್ತು.

ADVERTISEMENT

ಇತರ ಫಲಿತಾಂಶ: ಚೀನಾ 2–0ಯಿಂದ ಇಂಗ್ಲೆಂಡ್‌ ವಿರುದ್ಧ; ಜಪಾನ್‌ 2–0ಯಿಂದ ಐರ್ಲೆಂಡ್‌ ವಿರುದ್ಧ; ಥಾಯ್ಲೆಂಡ್‌ 2–0ಯಿಂದ ಪೋರ್ಚುಗಲ್‌ ವಿರುದ್ಧ; ಫ್ರಾನ್ಸ್‌ 2–0ಯಿಂದ ಈಜಿಪ್ಟ್‌ ವಿರುದ್ಧ; ಅಮೆರಿಕ 2–0ಯಿಂದ ನಾರ್ವೆ ವಿರುದ್ಧ; ಟರ್ಕಿ 2–0ಯಿಂದ ಘಾನಾ ವಿರುದ್ಧ; ಡೆನ್ಮಾರ್ಕ್‌ 2–0ಯಿಂದ ಬ್ರೆಜಿಲ್‌ ವಿರುದ್ಧ; ಪಿಲಿಪೀನ್ಸ್‌ 2–1ಯಿಂದ ಹಾಂಗ್‌ಕಾಂಗ್‌ ವಿರುದ್ಧ ಗೆಲುವು ಸಾಧಿಸಿದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.