ಲೊನಾಟೊ: ಭಾರತದ ಶೂಟರ್‌ಗಳಾದ ಲಕ್ಷಯ್ ಶೋರಾನ್ ಮತ್ತು ನೀರೂ ಧಂಡಾ ಅವರನ್ನು ಒಳಗೊಂಡ ಮಿಶ್ರ ತಂಡವು ಇಲ್ಲಿ ನಡೆದ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನ ಟ್ರಾಫ್ ಸ್ಪರ್ಧೆಯಲ್ಲಿ ಪದಕದ ಸುತ್ತಿಗೇರಲು ವಿಫಲವಾಯಿತು.
ಲಕ್ಷಯ್ (22, 19, 25) ಮತ್ತು ನೀರೂ (25, 24, 25) ಜೋಡಿಯು ಅರ್ಹತಾ ಸುತ್ತಿನಲ್ಲಿ 150ರಲ್ಲಿ 140 ಅಂಕ ಗಳಿಸಿ, ಸ್ಪರ್ಧೆಯಲ್ಲಿದ್ದ 54 ಜೋಡಿಗಳ ಪೈಕಿ ಹತ್ತನೇ ಸ್ಥಾನ ಪಡೆದು ನಿರಾಸೆ ಮೂಡಿಸಿತು.
ಸ್ಪರ್ಧೆಯಲ್ಲಿದ್ದ ಭಾರತದ ಮತ್ತೊಂದು ಜೋಡಿ ಜೋರಾವರ್ ಸಿಂಗ್ ಸಂಧು (21, 23, 24) ಮತ್ತು ಪ್ರೀತಿ ರಜಾಕ್ (23, 24, 23) ಒಟ್ಟು 138 ಅಂಕಗಳೊಂದಿಗೆ 22ನೇ ಸ್ಥಾನ ಪಡೆದರು.
ಇದಕ್ಕೂ ಮುನ್ನ ರಾಷ್ಟ್ರೀಯ ಗೇಮ್ಸ್ ಚಾಂಪಿಯನ್ ನೀರೂ ಧಂಡಾ ಮಹಿಳೆಯರ ವೈಯಕ್ತಿಕ ಟ್ರ್ಯಾಪ್ ಸ್ಪರ್ಧೆಯಲ್ಲಿ ಶನಿವಾರ ನಾಲ್ಕನೇ ಸ್ಥಾನ ಗಳಿಸಿ ಗಮನಾರ್ಹ ಸಾಧನೆ ತೋರಿದ್ದರು.
ನಿಕೋಸಿಯಾದಲ್ಲಿ ನಡೆದಿದ್ದ ಶಾಟ್‌ಗನ್ ವಿಶ್ವಕಪ್‌ನಲ್ಲಿ ಭಾರತದ ಕೈನಾನ್ ಚೆನೈ ಮತ್ತು ಸಬೀರಾ ಹ್ಯಾರಿಸ್ ಅವರನ್ನು ಒಳಗೊಂಡ ಮಿಶ್ರ ತಂಡವು ಕಂಚಿನ ಪದಕ ಜಯಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.