ನವದೆಹಲಿ: ಭಾರತದ 31 ವರ್ಷದೊಳಗಿನವರ ಬ್ರಿಡ್ಜ್ ತಂಡವು ಇಟಲಿಯಲ್ಲಿ ನಡೆದ 19ನೇ ವಿಶ್ವ ಯುವ ತಂಡಗಳ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿತು. 16 ವರ್ಷದೊಳಗಿನವರ ತಂಡವು ನಾಲ್ಕನೇ ಸ್ಥಾನ ಪಡೆದುಕೊಂಡಿತು.
ಟೂರ್ನಿಯ ಅಂತಿಮ ದಿನವಾದ ಗುರುವಾರ ಎರಡೂ ತಂಡಗಳು ಸೆಮಿಫೈನಲ್‌ನಲ್ಲಿ ಪರಾಭವಗೊಂಡವು. ಬಳಿಕ ‘ಬೋರ್ಡ್ ಎ ಗೇಮ್’ ಸ್ಪರ್ಧೆಯಲ್ಲಿ ಗೆದ್ದ 31 ವರ್ಷದೊಳಗಿನವರ ತಂಡಕ್ಕೆ ಮೂರನೇ ಸ್ಥಾನ ಲಭಿಸಿತು.
16 ವರ್ಷದೊಳಗಿನವರ ಭಾರತ ತಂಡವು ಇದೇ ಮೊದಲ ಬಾರಿ ಸೆಮಿಫೈನಲ್ ತಲುಪಿದ ಸಾಧನೆ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.