ADVERTISEMENT

ಅಂತರರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ ಲಾಕ್ರಾ

ದೇಶೀಯ ಟೂರ್ನಿಗಳಲ್ಲಿ ಆಡುವ ನಿರ್ಧಾರ

ಪಿಟಿಐ
Published 2 ಜನವರಿ 2020, 20:32 IST
Last Updated 2 ಜನವರಿ 2020, 20:32 IST
ಸುನಿತಾ ಲಾಕ್ರಾ
ಸುನಿತಾ ಲಾಕ್ರಾ   

ನವದೆಹಲಿ: ಭಾರತ ಮಹಿಳಾ ತಂಡದ ಡಿಫೆಂಡರ್‌ ಸುನಿತಾ ಲಾಕ್ರಾ ಅವರು ಅಂತರರಾಷ್ಟ್ರೀಯ ಹಾಕಿಗೆ ವಿದಾಯ ಹೇಳುವುದಾಗಿ ಗುರುವಾರ ಪ್ರಕಟಿಸಿದರು. ಮೊಣಕಾಲಿನ ಗಾಯಕ್ಕೆ ಮತ್ತೊಂದು ಶಸ್ತ್ರಚಿಕಿತ್ಸೆಯ ಅಗತ್ಯವಿರುವುದರಿಂದ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.

28 ವರ್ಷದ ಸುನಿತಾ, 2018ರ ಏಷ್ಯನ್‌ ಕ್ರೀಡೆಗಳಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದ ತಂಡದಲ್ಲಿದ್ದರು. ‘ಈ ವರ್ಷದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ಭಾಗವಾಗುವ ತಮ್ಮ ಕನಸಿಗೆ ಗಾಯದ ಸಮಸ್ಯೆ ಅಡ್ಡಿ ಉಂಟುಮಾಡಿದೆ’ ಎಂದಿದ್ದಾರೆ ಸುನಿತಾ.

ಸುನಿತಾ 2008 ರಿಂದ ರಾಷ್ಟ್ರೀಯ ತಂಡದಲ್ಲಿದ್ದಾರೆ. 2018ರಲ್ಲಿ ಅವರು ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಡಿದ ತಂಡಕ್ಕೆ ನಾಯಕಿಯಾ ಗಿದ್ದರು.

ADVERTISEMENT

‘2016ರಲ್ಲಿ ರಿಯೊ ಒಲಿಂಪಿಕ್ಸ್‌ನಲ್ಲಿ ಆಡಿದ್ದ ತಂಡದಲ್ಲಿರಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಭಾರತ ಮೂರು ದಶಕಗಳಲ್ಲಿ ಅದೇ ಮೊದಲ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿತ್ತು. ಟೋಕಿಯೊ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿರುವ ಭಾರತ ತಂಡದಲ್ಲಿರಬೇಕೆಂಬ ಆಸೆಯಿತ್ತು. ಆದರೆ ಮೊಣಕಾಲಿನ ಗಾಯ ನನ್ನ ಕನಸನ್ನು ಭಗ್ನಗೊಳಿಸಿತು’ ಎಂದು ಹೇಳಿದರು. ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ನಂತರ ದೇಶಿಯ ಟೂರ್ನಿಗಳಲ್ಲಿ ಆಡುವುದಾಗಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.