ಈಂಡ್‌ಹೋವೆನ್ (ನೆದರ್ಲೆಂಡ್ಸ್): ಭಾರತ ಪುರುಷರ ಹಾಕಿ ‘ಎ’ ತಂಡ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಅಧಿಕಾರಯುತ ಆಟವಾಡಿ 6–1 ಗೋಲುಗಳಿಂದ ಐರ್ಲೆಂಡ್ ತಂಡವನ್ನು ಸೋಲಿಸಿತು. ಆ ಮೂಲಕ ಯುರೋಪ್ ಪ್ರವಾಸವನ್ನು ಯಶಸ್ಸಿನೊಡನೆ ಆರಂಭಿಸಿತು.
ಆದಿತ್ಯ ಲಾಲಗೆ ಎರಡು ಗೋಲು ಗಳಿಸಿದರು. ಉತ್ತಮ್ ಸಿಂಗ್, ಅಮನ್‌ದೀಪ್ ಲಾಕ್ರಾ, ಸೆಲ್ವಂ ಕಾರ್ತಿ ಮತ್ತು ಬಾಬಿ ಸಿಂಗ್ ಧಾಮಿ ಅವರು ತಲಾ ಒಂದೊಂದು ಗೋಲು ಗಳಿಸಿದರು.
ಐರ್ಲೆಂಡ್ ತಂಡದ ವಿರುದ್ಧ ಮತ್ತೊಂದು ಪಂದ್ಯ ಆಡಲಿರುವ ಭಾರತ ನಂತರ ಎರಡು ವಾರಗಳ ಅವಧಿಯಲ್ಲಿ ಫ್ರಾನ್ಸ್, ಇಂಗ್ಲೆಂಡ್, ಬೆಲ್ಜಿಯಂ ಮತ್ತು ಆತಿಥೇಯ ನೆದರ್ಲೆಂಡ್ಸ್ ವಿರುದ್ಧ ಪಂದ್ಯಗಳನ್ನು ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.