ಬೆಂಗಳೂರು: ಭಾರತದ ವೃತ್ತಿಪರ ಬ್ಯಾಸ್ಕೆಟ್‌ಬಾಲ್ ಆಟಗಾರ ಉಲ್ಲಾಸ್ ಕೆ.ಎಸ್. ಸಾರಥ್ಯದ ‘ಉಲ್ಲಾಸ್ ಯುವಿ ಪೆಪ್ ಬ್ಯಾಸ್ಕೆಟ್‌ಬಾಲ್ ಅಕಾಡೆಮಿ’ಗೆ (ಯುವೈಬಿಎ) ಫಿಬಾ ಏಷ್ಯಾ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಬ್ಯಾಸ್ಕೆಟ್ ಬಾಲ್ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಗೋವಿಂದರಾಜ್ ಬುಧವಾರ ನಗರದಲ್ಲಿ ಚಾಲನೆ ನೀಡಿದರು.
‘ಸಂಸ್ಥೆಯ ಮೂಲಕ ರಾಜ್ಯದಲ್ಲಿ ಬ್ಯಾಸ್ಕೆಟ್‌ಬಾಲ್ ಕ್ರೀಡೆಗೆ ಉತ್ತೇಜನ ನೀಡಲಾಗುತ್ತಿದೆ. ಅದಕ್ಕೆ ಪೂರಕವಾಗಿ ನುರಿತ ಕೋಚ್‌ಗಳನ್ನು ಒಳಗೊಂಡ ಯುವೈಬಿಎ ಸಂಸ್ಥೆಯು ರಾಜ್ಯದಲ್ಲಿ
ಆರಂಭಗೊಂಡಿರುವುದು ಉತ್ತಮ ಬೆಳವಣಿಗೆ. ಸುಪ್ತ ಪ್ರತಿಭೆಗಳು ಹೊರಹೊಮ್ಮಲು ಇದು ಸಹಕಾರಿಯಾಗಲಿದೆ’ ಎಂದು ಗೋವಿಂದರಾಜ್ ಅಭಿಪ್ರಾಯಪಟ್ಟರು.
ಯುರೋಪ್‌ನಲ್ಲಿ ವೃತ್ತಿಪರ ಬ್ಯಾಸ್ಕೆಟ್‌ಬಾಲ್ ಆಡಿದ ಭಾರತದ ಮೊದಲ ಆಟಗಾರನಾಗಿರುವ ಉಲ್ಲಾಸ್ ಅವರು ದೇಶದಲ್ಲಿ ಬ್ಯಾಸ್ಕೆಟ್‌ಬಾಲ್ ತರಬೇತಿಯನ್ನು ಉನ್ನತೀಕರಿಸುವ ಗುರಿಯೊಂದಿಗೆ ಯುವೈಬಿಎ ಆರಂಭಿಸಿದ್ದಾರೆ. ತಮಿಳುನಾಡಿನ 24 ವರ್ಷ ವಯಸ್ಸಿನ ಉಲ್ಲಾಸ್, ರಾಷ್ಟ್ರೀಯ ತಂಡ ಮತ್ತು ಅಂತರರಾಷ್ಟ್ರೀಯ ಲೀಗ್‌ಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.