ADVERTISEMENT

ಬಾಕ್ಸಿಂಗ್‌: ಅಭಿಷೇಕ್‌ ಯಾದವ್‌ ಸೆಮಿಗೆ

ಪಿಟಿಐ
Published 15 ಮೇ 2024, 17:40 IST
Last Updated 15 ಮೇ 2024, 17:40 IST
ಸೆಮಿಫೈನಲ್‌ ಪ್ರವೇಶಿಸಿದ ಅಭಿಷೇಕ್‌ ಯಾದವ್ (ಮಧ್ಯ)
ಸೆಮಿಫೈನಲ್‌ ಪ್ರವೇಶಿಸಿದ ಅಭಿಷೇಕ್‌ ಯಾದವ್ (ಮಧ್ಯ)   

ಅಸ್ತಾನಾ (ಕಜಕಸ್ತಾನ) (ಪಿಟಿಐ): ಭಾರತದ ಅಭಿಷೇಕ್‌ ಯಾದವ್‌ ಬುಧವಾರ ಇಲ್ಲಿ ನಡೆದ ಎಲೋರ್ಡಾ ಕಪ್ ಬಾಕ್ಸಿಂಗ್ ಟೂರ್ನಿಯಲ್ಲಿ ಕಜಕಸ್ತಾನದ ರಖತ್ ಸೀಟ್ಜಾನ್ ಅವರನ್ನು ಸೋಲಿಸಿ ಸೆಮಿಫೈನಲ್‌ ಪ್ರವೇಶಿಸಿದರು.

ಪುರುಷರ 67 ಕೆ.ಜಿ ವಿಭಾಗದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಅಭಿಷೇಕ್‌ 5–0 ಅಂತರದಿಂದ ಎದುರಾಳಿ ಬಾಕ್ಸರ್‌ನಲ್ಲಿ ಮಣಿಸಿದರು.

ಭಾರತದ ನಾಲ್ಕು ಬಾಕ್ಸರ್‌ಗಳು ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಅನುಭವಿಸಿದರು. 54 ಕೆ.ಜಿ ವಿಭಾಗದಲ್ಲಿ ಪವನ್‌ ಬರ್ತ್‌ವಾಲ್ 1–4ರಿಂದ ಕಜಕಸ್ತಾನದ ಕಬ್ದೇಶೋವ್ ತೈಮೂರ್ ಅವರಿಗೆ ಶರಣಾದರು. 57 ಕೆ.ಜಿ ವಿಭಾಗದಲ್ಲಿ ಕವಿಂದರ್ ಸಿಂಗ್ ಬಿಶ್ತ್ ಅವರು ಉಜ್ಬೇಕಿಸ್ತಾನದ ಮಿರಾಜ್‌ಬೆಕ್ ಮಿರ್ಜಹಲಿಲೋವ್ ವಿರುದ್ಧ ಪರಾಭವಗೊಂಡರು.

ADVERTISEMENT

ವಿರೀಂದರ್ ಸಿಂಗ್ (60 ಕೆ.ಜಿ) ಮತ್ತು ಹಿತೇಶ್ (71 ಕೆ.ಜಿ) ಅವರು ಕ್ರಮವಾಗಿ ಕಜಕಸ್ತಾನದ ಟೆಮಿರ್ಜಾನೊವ್ ಸೆರಿಕ್ ಮತ್ತು ಅಸ್ಲಾನ್‌ಬೆಕ್ ಶೈಂಬರ್‌ಗೆನೊವ್ ವಿರುದ್ಧ ಸೋತರು.

ಮಂಗಳವಾರ ತಡರಾತ್ರಿ ಮನೀಶಾ (60 ಕೆ.ಜಿ) ಮತ್ತು ಮೋನಿಕಾ (81 ಕೆ.ಜಿ) ಸೆಮಿಫೈನಲ್ ಪ್ರವೇಶಿಸಿ ಭಾರತಕ್ಕೆ ಎರಡು ಪದಕಗಳನ್ನು ಖಚಿತ ಪಡಿಸಿದರು.

ಗುರುವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಮನೀಶಾ ಮತ್ತು ಮೋನಿಕಾ ಅವರೊಂದಿಗೆ ಮೀನಾಕ್ಷಿ (48 ಕೆ.ಜಿ), ಅನಾಮಿಕಾ (50 ಕೆ.ಜಿ), ನಿಖತ್ ಜರೀನ್ (52 ಕೆ.ಜಿ), ಸೋನು (63 ಕೆ.ಜಿ), ಮಂಜು ಬಂಬೋರಿಯಾ (66 ಕೆ.ಜಿ) ಮತ್ತು ಶಲಾಖಾ ಸಿಂಗ್ ಸಂಸನ್‌ವಾಲ್ (70 ಕೆ.ಜಿ) ಸೆಣಸಲಿದ್ದಾರೆ. ಶನಿವಾರ ಫೈನಲ್‌ ಹಣಾಹಣಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.