ADVERTISEMENT

ಜೆಕ್‌ ಗಣರಾಜ್ಯ ಚೆಸ್‌: ಲಲಿತ್‌ ಬಾಬುಗೆ ಪ್ರಶಸ್ತಿ

ಪಿಟಿಐ
Published 23 ಜನವರಿ 2022, 13:24 IST
Last Updated 23 ಜನವರಿ 2022, 13:24 IST
ಲಲಿತ್‌ ಬಾಬು– ಟ್ವಿಟರ್‌ ಚಿತ್ರ
ಲಲಿತ್‌ ಬಾಬು– ಟ್ವಿಟರ್‌ ಚಿತ್ರ   

ಮರಿನಾಸ್ಕ್ ಲಾಜ್ನೆ, ಜೆಕ್‌ ಗಣರಾಜ್ಯ: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಎಂ.ಆರ್‌. ಲಲಿತ್ ಬಾಬು ಅವರು ಇಲ್ಲಿ ನಡೆದ ಮರಿಯನ್‌ಬಾದ್‌ ಓಪನ್ ಚೆಸ್‌ ಟೂರ್ನಿಯಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ಟೂರ್ನಿಯ ಒಂಬತ್ತು ಸುತ್ತುಗಳಲ್ಲಿ ಅಜೇಯವಾಗುಳಿದ ಲಲಿತ್‌, 6.5 ಪಾಯಿಂಟ್ಸ್ ಗಳಿಸಿದರು. ರನ್ನರ್ ಅಪ್ ಸ್ಥಾನ ಪಡೆದ ಐಲ್ಯಾಂಡ್‌ ಗ್ರ್ಯಾಂಡ್‌ಮಾಸ್ಟರ್‌ ಹ್ಯಾನೆಸ್‌ ಸ್ಟೆಫಾನ್ಸನ್‌ ಆರು ಪಾಯಿಂಟ್ಸ್ ಕಲೆಹಾಕಿದರು.

ಲಲಿತ್ ಅವರು ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದರೆ ಇನ್ನುಳಿದ ಐದು ಪಂದ್ಯಗಳನ್ನು ಡ್ರಾ ಮಾಡಿಕೊಂಡು ಅಗ್ರಸ್ಥಾನ ಪಡೆದರು. 29 ವರ್ಷದ ಆಟಗಾರ, ಶನಿವಾರ ರಾತ್ರಿ ನಡೆದ ಕೊನೆಯ ಸುತ್ತಿನ ಪಂದ್ಯದಲ್ಲಿ ಸ್ಟೆಫಾನ್ಸನ್ ಎದುರು ಡ್ರಾ ಮಾಡಿಕೊಂಡಿದ್ದರು.

ADVERTISEMENT

ಲಲಿತ್ ಅವರಿಗೆ ಒಲಿದ ಸತತ ಮೂರನೇ ಪ್ರಶಸ್ತಿ ಇದು. ಈ ಹಿಂದೆ ಅವರು ಥಾಯ್ಲೆಂಡ್‌ ಮತ್ತು ಇಟಲಿ ಟೂರ್ನಿಗಳಲ್ಲಿ ಕಿರೀಟ ಧರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.