ADVERTISEMENT

Asian Games: 10 ಮೀ ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಭಾರತಕ್ಕೆ ಚಿನ್ನ

ಪಿಟಿಐ
Published 28 ಸೆಪ್ಟೆಂಬರ್ 2023, 3:15 IST
Last Updated 28 ಸೆಪ್ಟೆಂಬರ್ 2023, 3:15 IST
<div class="paragraphs"><p>ಅರ್ಜುನ್ ಸಿಂಗ್</p></div>

ಅರ್ಜುನ್ ಸಿಂಗ್

   

ಪಿಟಿಐ

ಹಾಂಗ್‌ಝೌ: ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ ಕ್ರೀಡಾಕೂಟದ 10 ಮೀಟರ್ಸ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಪುರುಷರ ತಂಡವು ಚಿನ್ನ ಗೆದ್ದಿದೆ.

ADVERTISEMENT

ಸರಬ್ಜೋತ್ ಸಿಂಗ್, ಅರ್ಜುನ್ ಸಿಂಗ್ ಚೀಮಾ ಮತ್ತು ಶಿವ ನರ್ವಾಲ್ ಅವರ ತಂಡವು ಚೀನಾ ತಂಡವನ್ನು ಸೋಲಿಸುವ ಮೂಲಕ ಪದಕ ಜಯಿಸಿತು. ಈ ಮೂಲಕ ಶೂಟಿಂಗ್‌ನಲ್ಲಿ ಭಾರತಕ್ಕೆ ನಾಲ್ಕನೇ ಚಿನ್ನದ ಪದಕವನ್ನು ಗಳಿಸಿಕೊಟ್ಟಿತು.

ಇಂದಿನ ಯಶಸ್ಸಿನೊಂದಿಗೆ ಭಾರತದ ಶೂಟರ್‌ಗಳು ಇದುವರೆಗೆ ನಾಲ್ಕು ಚಿನ್ನ, ನಾಲ್ಕು ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಭಾರತದ ತಂಡವು ಒಟ್ಟು 1734 ಅಂಕಗಳನ್ನು ಪಡೆಯುವ ಮೂಲಕ ಚೀನೀ ತಂಡಕ್ಕೆ ಕೇವಲ ಒಂದು ಅಂಕದಿಂದ ಸೋಲುಣಿಸಿತು. ವಿಯೆಟ್ನಾಂ 1730 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದಿತು.

ಸರಬ್ಜೋತ್ ಮತ್ತು ಅರ್ಜುನ್ ಎಂಟು ಶೂಟರ್‌ಗಳ ಫೈನಲ್‌ಗೂ ಪ್ರವೇಶಿಸಿದ್ದು, ವೈಯಕ್ತಿಕ ಪದಕಗಳಿಗೂ ಸ್ಪರ್ಧೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.