ADVERTISEMENT

ಕಾಮನ್‌ವೆಲ್ತ್ ಗೇಮ್ಸ್ 2022: ಪದಕದ ಸನಿಹಕ್ಕೆ ಬಂದ ಭಾರತದ ಟೇಬಲ್ ಟೆನ್ನಿಸ್ ತಂಡ

ಐಎಎನ್ಎಸ್
Published 31 ಜುಲೈ 2022, 13:39 IST
Last Updated 31 ಜುಲೈ 2022, 13:39 IST
ಅಚಂತಾ ಕಮಲ್
ಅಚಂತಾ ಕಮಲ್    

ಬರ್ಮಿಂಗ್‌ಹ್ಯಾಮ್: ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022 ಕ್ರೀಡಾಕೂಟದಲ್ಲಿ ಭಾರತದ ಪುರುಷರ ಟೇಬಲ್ ಟೆನ್ನಿಸ್ ತಂಡ ಸೆಮಿಫೈನಲ್ ಪ್ರವೇಶ ಮಾಡಿದೆ.

ಲೀಗ್‌ನಲ್ಲಿ ಭಾರತ ಟೇಬಲ್ ಟೆನ್ನಿಸ್ ತಂಡ ಬಾಂಗ್ಲಾದೇಶವನ್ನು 3–0 ಅಂತರದಲ್ಲಿ ಸೋಲಿಸುವ ಮೂಲಕ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿತು.

ಅಚಂತಾ ಕಮಲ್ ನಾಯಕತ್ವದ ಭಾರತ ತಂಡ ಕ್ಯಾರ್ಟರ್ ಫೈನಲ್‌ನಲ್ಲಿ ಬಾರ್ಬಡೋಸ್, ಸಿಂಗಾಪುರ್, ಉತ್ತರ ಐರ್ಲೆಂಡ್ ತಂಡವನ್ನು ಬಗ್ಗುಬಡೆದು ಸೆಮಿಫೈನಲ್ ಕದ ತಟ್ಟಿತು. ಈ ಮೂಲಕ ಪದಕದ ಆಸೆಯನ್ನು ಟೇಬಲ್ ಟೆನ್ನಿಸ್ ತಂಡ ಜೀವಂತವಾಗಿರಿಸಿದೆ.

ADVERTISEMENT

ಭಾರತಕ್ಕೆ ಎರಡನೇ ಚಿನ್ನ ತಂದ ಮಿಜೋರಾಂನ ಜರ್ಮಿ

ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟ 2022 ರಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕ ಲಭಿಸಿದೆ.

ಪುರುಷರ ವೇಟ್‌ಲಿಫ್ಟಿಂಗ್‌ನ 67 ಕೆ.ಜಿ ವಿಭಾಗದಲ್ಲಿ ಮಿಜೋರಾಂನ 19 ವರ್ಷದ ಜರ್ಮಿ ಲಾಲ್‌ರಿನುಂಗಾ ಅವರು ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

ಒಟ್ಟು 300ಕೆಜಿ ಭಾರ ಎತ್ತುವ ಮೂಲಕ ಕಾಮನ್‌ವೆಲ್ತ್‌ನ ವೇಟ್‌ಲಿಫ್ಟಿಂಗ್‌ನಲ್ಲಿ ಜರ್ಮಿ ಅವರು ಹೊಸ ದಾಖಲೆ ನಿರ್ಮಿಸಿದರು.

ಮೀರಾಬಾಯಿ ಚಾನು ಅವರು ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದಿದ್ದರು.ಶನಿವಾರ ನಡೆದ ಮಹಿಳೆಯರ ವೇಟ್‌ಲಿಫ್ಟಿಂಗ್‌ನಲ್ಲಿ 49 ಕೆ.ಜಿ. ವಿಭಾಗದಲ್ಲಿ ಅವರು ಒಟ್ಟು 201 ಕೆ.ಜಿ (88 ಕೆ.ಜಿ+ 113 ಕೆ.ಜಿ) ಭಾರ ಎತ್ತುವ ಮೂಲಕ ಅಗ್ರಸ್ಥಾನ ಪಡೆದಿದ್ದರು.

ಇಲ್ಲಿವರೆಗೆಕಾಮನ್‌ವೆಲ್ತ್‌ ಕ್ರೀಡಾಕೂಟ 2022 ರಲ್ಲಿ ಭಾರತಕ್ಕೆ 5ಪದಕಗಳು ಲಭಿಸಿವೆ (2 ಚಿನ್ನ, 2 ಬೆಳ್ಳಿ 1ಕಂಚು).

ವೇಟ್‌ಲಿಫ್ಟಿಂಗ್‌ನಲ್ಲಿ ಸಂಕೇತ್ ಸರ್ಗರ್, ಬಿಂದ್ಯಾರಾಣಿ ಬೆಳ್ಳಿ ಗೆದ್ದಿದ್ಧಾರೆ. ಕರ್ನಾಟಕದ ಗುರುರಾಜ್ ಪೂಜಾರಿ ಕಂಚು ಗೆದ್ದಿದ್ದಾರೆ. ಈ ಎಲ್ಲ ಐವರೂ ಕ್ರೀಡಾಪಟುಗಳಿಗೆ ರಾಷ್ಟ್ರಪತಿ, ಪ್ರಧಾನಿ ಹಾಗೂ ಗಣ್ಯರು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.