ಪ್ರಾತಿನಿಧಿಕ ಚಿತ್ರ
ಅಹಮದಾಬಾದ್: ಭಾರತ ಪುರುಷರ ವಾಟರ್ ಪೋಲೊ ತಂಡವು ಇಲ್ಲಿ ನಡೆಯುತ್ತಿರುವ ಏಷ್ಯನ್ ಅಕ್ವಾಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ 6-20 ಅಂತರದಿಂದ ಕಜಾಕಸ್ತಾನ ತಂಡಕ್ಕೆ ಮಣಿಯಿತು.
ಪುರುಷರ ವಿಭಾಗದ ಬಿ ಗುಂಪಿನ ಸ್ಪರ್ಧೆಯಲ್ಲಿ ಭಾರತ ಪರ ಭಾಗೇಶ್ ಹ್ಯಾಟ್ರಿಕ್ ಗೋಲು ಗಳಿಸಿದರು. ಕಜಾಕಸ್ತಾನದ ಪರ ಬಾಲ್‌ಟಾಬ್ಕುಲಿ ಆದಿಲ್ ಮತ್ತು ನೆಡೊಕೊಂಟ್ಸೆವ್ ತಲಾ ನಾಲ್ಕು ಗೋಲುಗಳನ್ನು ಗಳಿಸಿದರೆ, ಟೊಸೊಯ್ ಎಡ್ವರ್ಡ್ ಮೂರು ಗೋಲು ತಂದಿತ್ತರು.
ಇತರ ಪಂದ್ಯಗಳಲ್ಲಿ ಚೀನಾ 21–2ರಿಂದ ಹಾಂಗ್‌ಕಾಂಗ್ ವಿರುದ್ಧ; ಇರಾನ್ 28–7ರಿಂದ ಉಜ್ಬೇಕಿಸ್ತಾನ ವಿರುದ್ಧ; ಸಿಂಗಪುರ 19–11ರಿಂದ ಥಾಯ್ಲೆಂಡ್ ವಿರುದ್ಧ ಗೆಲುವು ಸಾಧಿಸಿದವು.
ಭಾರತ ಮಹಿಳಾ ತಂಡವು ತನ್ನ ಗುಂಪು ಹಂತದ ಎರಡನೇ ಪಂದ್ಯದಲ್ಲಿ ಮಂಗಳವಾರ ಉಜ್ಬೇಕಿಸ್ತಾನ ತಂಡವನ್ನು ಎದುರಿಸಲಿದೆ. ನಾಲ್ಕು ತಂಡಗಳ ಗುಂಪಿನಲ್ಲಿ ಯಾವುದೇ ಸ್ಥಾನ ಪಡೆದರೂ ಭಾರತ ತಂಡ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯಲಿದೆ.
ಕಲಾತ್ಮಕ ಈಜು ಸ್ಪರ್ಧೆಯಲ್ಲಿ, ಕಜಾಕಸ್ತಾನದ ಕರೀನಾ ಮಗ್ರುಪೋವಾ ಮತ್ತು ವಿಕ್ಟರ್ ಡ್ರುಜಿನ್ ಕ್ರಮವಾಗಿ ಮಹಿಳಾ ಮತ್ತು ಪುರುಷರ ವೈಯಕ್ತಿಕ ಮುಕ್ತ ಸ್ಪರ್ಧೆಗಳಲ್ಲಿ ಅಗ್ರಸ್ಥಾನವನ್ನು ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.