ADVERTISEMENT

ಟೇಬಲ್ ಟನಿಸ್‌ | ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ

ಭಾರತ ಪುರುಷ, ಮಹಿಳಾ ತಂಡ ಐತಿಹಾಸಿಕ ಸಾಧನೆ

ಪಿಟಿಐ
Published 4 ಮಾರ್ಚ್ 2024, 16:40 IST
Last Updated 4 ಮಾರ್ಚ್ 2024, 16:40 IST
ಮಣಿಕಾ ಬಾತ್ರಾ
ಮಣಿಕಾ ಬಾತ್ರಾ   

‌ನವದೆಹಲಿ: ವಿಶ್ವ ಶ್ರೇಯಾಂಕದ ಆಧಾರದ ಮೇಲೆ ಭಾರತ ಪುರುಷರ ಮತ್ತು ಮಹಿಳಾ ಟೇಬಲ್ ಟನಿಸ್‌ ತಂಡಗಳು ಸೋಮವಾರ ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಮೂಲಕ ಇತಿಹಾಸ ಬರೆದಿವೆ.

ಕಳೆದ ತಿಂಗಳು ದಕ್ಷಿಣ ಕೊರಿಯಾದ ಬೂಸಾನ್‌ನಲ್ಲಿ ನಡೆದ ವಿಶ್ವ ಟೇಬಲ್ ಟೆನಿಸ್‌ ಟೀಮ್ ಚಾಂಪಿಯನ್‌ಷಿಪ್‌ಅನ್ನು, ಪ್ಯಾರಿಸ್ ಒಲಿಂಪಿಕ್ಸ್‌ಗೆ ಕೊನೆಯ ಅರ್ಹತಾ ಕೂಟವಾಗಿ ಪರಿಗಣಿಸಲಾಗಿತ್ತು. ಇದರ ನಂತರವೂ ತಂಡ ವಿಭಾಗದಲ್ಲಿ ಏಳು ಸ್ಥಾನಗಳು ಉಳಿದಿದ್ದವು. ಅವುಗಳನ್ನು ತಂಡಗಳ ರ‍್ಯಾಂಕಿಂಗ್ ಆಧಾರದ ಮೇಲೆ ಒಲಿಂಪಿಕ್ಸ್‌ಗೆ ಪರಿಗಣಿಸಲಾಯಿತು.

‌ಮಹಿಳೆಯರ ವಿಭಾಗದಲ್ಲಿ ಭಾರತ 13ನೇ ಸ್ಥಾನ, ಪೋಲೆಂಡ್ (12), ಸ್ವೀಡನ್ (15) ಮತ್ತು ಥಾಯ್ಲೆಂಡ್ ತಂಡಗಳು ಈ ವರ್ಷದ ಪ್ಯಾರಿಸ್ ಕ್ರೀಡೆಗಳಿಗೆ ಅರ್ಹತೆ ಪಡೆದವು,

ADVERTISEMENT

ಪುರುಷರ ತಂಡ ವಿಭಾಗದಲ್ಲಿ ಕ್ರೊಯೇಷಿಯಾ (12ನೇ ಸ್ಥಾನ), ಭಾರತ (15) ಮತ್ತು ಸ್ಲೊವೇನಿಯಾ (11) ಸ್ಥಾನ ಪಡೆದಿವೆ.

‘ಕೊನೆಗೂ...!, ಒಲಿಂಪಿಕ್ಸ್‌ನಲ್ಲಿ ತಂಡ ಸ್ಪರ್ಧೆಗೆ ಭಾರತ ಅರ್ಹತೆ ಪಡೆದಿದೆ. ನಾನು ಬಹಳ ದಿನಗಳಿಂದ ಬಯಸುತ್ತಿದ್ದೆ. ಒಲಿಂಪಿಕ್ಸ್‌ನಲ್ಲಿ ಇದು ನನ್ನ ಐದನೇ ಪ್ರದರ್ಶನವಾಗಿದ್ದರೂ ನಿಜವಾಗಿಯೂ ವಿಶೇಷವಾಗಿದೆ. ಐತಿಹಾಸಿಕ ಕೋಟಾವನ್ನು ಪಡೆದ ಮಹಿಳಾ ತಂಡಕ್ಕೂ ಅಭಿನಂದನೆಗಳು’ ಎಂದು ಅನುಭವಿ ಆಟಗಾರ ಶರತ್ ಕಮಲ್ ಟ್ವೀಟ್ ಮಾಡಿದ್ದಾರೆ.

ಇದು ಭಾರತೀಯ ಟೇಬಲ್ ಟೆನಿಸ್ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಏಕೆಂದರೆ ಬೀಜಿಂಗ್ 2008 ಕ್ರೀಡಾಕೂಟದಲ್ಲಿ ತಂಡ ವಿಭಾಗದ ಸ್ಪರ್ಧೆಗಳು ಆರಂಭವಾದ ನಂತರ ರಾಷ್ಟ್ರವು ಒಲಿಂಪಿಕ್ಸ್‌ನಲ್ಲಿ ಈ ವಿಭಾಗದಲ್ಲಿ ಸ್ಪರ್ಧಿಸುತ್ತಿರುವುದು ಇದೇ ಮೊದಲು. 

ಭಾರತ ಎರಡು ತಂಡಗಳು ಐಟಿಟಿಎಫ್ ವಿಶ್ವ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಿಕ್ವಾರ್ಟರ್‌ ಫೈನಲ್‌ನಲ್ಲಿ ಹೊರಬಿದ್ದ ನಂತರ  ಒಲಿಂಪಿಕ್ ಸ್ಥಾನಗಳನ್ನು ಕಳೆದುಕೊಂಡಿದ್ದವು.

ಅನುಭವಿ ಶರತ್ ನೇತೃತ್ವದ ಪುರುಷರ ಟೇಬಲ್ ಟೆನಿಸ್ ತಂಡವು ದಕ್ಷಿಣ ಕೊರಿಯಾ ವಿರುದ್ಧ 0-3 ಗೋಲುಗಳಿಂದ ಸೋತರೆ, ಮಣಿಕಾ ಬಾತ್ರಾ ನೇತೃತ್ವದ ಮಹಿಳಾ ತಂಡವು ಚೀನಾ ತೈಪೆ ವಿರುದ್ಧ 1-3 ಅಂತರದಲ್ಲಿ ಸೋತಿತು.

ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಪುರುಷ ಮತ್ತು ಮಹಿಳಾ ತಂಡಗಳು ಕ್ರೀಡಾಕೂಟಕ್ಕೆ ಮುಂಚಿತವಾಗಿ ಏಷ್ಯಾ ಮತ್ತು ಯುರೋಪ್‌ನಲ್ಲಿ ತರಬೇತಿ ಪಡೆಯುವ ನಿರೀಕ್ಷೆ ಇದೆ. 

ಶರತ್ ಕಮಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.