ನವದೆಹಲಿ (ಪಿಟಿಐ): ನೆದರ್ಲೆಂಡ್ಸ್‌ನ ಆಮ್‌ಸ್ಟಲ್ವೀನ್ ಮತ್ತು ಬೆಲ್ಜಿಯಮ್‌ನ ಆ್ಯಂಟ್‌ವರ್ಪ್‌ನಲ್ಲಿ ನಡೆಯಲಿರುವ ಯುರೋಪಿಯನ್ ಲೆಗ್‌ನ ಎಫ್‌ಐಎಚ್ ಹಾಕಿ ಪ್ರೊ ಲೀಗ್‌ಗೆ ಭಾರತ ತಂಡವನ್ನು ಗುರುವಾರ ಪ್ರಕಟಿಸಲಾಗಿದೆ. ಆಮ್‌ಸ್ಟಲ್ವೀನ್‌ನಲ್ಲಿ ಜೂನ್ 7 ಮತ್ತು 9ರಂದು ಎರಡು ಪಂದ್ಯಗಳನ್ನು ಆಡುವ ಮೂಲಕ ಭಾರತ ಅಭಿಯಾನ ಆರಂಭಿಸಲಿದೆ.
ಆಮ್‌ಸ್ಟಲ್ವೀನ್‌ನಲ್ಲಿ ಜೂನ್ 11 ಮತ್ತು 12ರಂದು ಪಂದ್ಯಗಳು ನಡೆಯಲಿವೆ. ತವರಿನಲ್ಲಿ ಭುವನೇಶ್ವರ ಲೆಗ್ ನಂತರ ತಂಡದ ಬಲವನ್ನು 32 ರಿಂದ 24ಕ್ಕೆ ಇಳಿಸಲಾಗಿದೆ. ಡಿಫೆಂಡರ್ ವರುಣ್ ಕುಮಾರ್, ಫಾರ್ವರ್ಡ್‌ಗಳಾದ ಬಾಬಿ ಸಿಂಗ್ ಧಾಮಿ, ಅರಿಜಿತ್ ಸಿಂಗ್ ಹುಂಡಲ್, ಉತ್ತಮ್ ಸಿಂಗ್, ಅರ್ಷದೀಪ್ ಅವರು ತಂಡದಲ್ಲಿಲ್ಲ.
ಗೋಲ್‌ಕೀಪರ್ಸ್: ಕಿಶನ್ ಬಹಾದ್ದೂರ್ ಪಾಠಕ್, ಸೂರಜ್ ಕರ್ಕೇರಾ; ಡಿಫೆಂಡರ್ಸ್: ಸುಮಿತ್, ಅಮಿತ್ ರೋಹಿದಾಸ್, ಜುಗರಾಜ ಸಿಂಗ್, ನಿಲಮ್ ಸಂಜೀಪ್ ಕ್ಸೆಸ್, ಹರ್ಮನ್‌ಪ್ರೀತ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್, ಸಂಜಯ್, ಯಶದೀಪ್ ಸಿವಾಚ್; ಮಿಡ್‌ಫೀಲ್ಡರ್ಸ್: ರಾಜಕುಮಾರ್ ಪಾಲ್, ನೀಲಕಂಠ ಶರ್ಮಾ, ಹಾರ್ದಿಕ್ ಸಿಂಗ್, ರಾಜಿಂದರ್ ಸಿಂಗ್, ಮನ್‌ಪ್ರೀತ್ ಸಿಂಗ್, ವಿವೇಕ ಸಾಗರ ಪ್ರಸಾದ್, ಶಂಶೇರ್ ಸಿಂಗ್, ಫಾರ್ವರ್ಡ್ಸ್: ಗುರ್ಜಂತ್ ಸಿಂಗ್, ಅಭಿಷೇಕ್, ಶಿಲಾನಂದ ಲಾಕ್ರಾ, ಮನದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ದಿಲ್‌ಪ್ರೀತ್ ಸಿಂಗ್ ಮತ್ತು ಸುಖಜೀತ್ ಸಿಂಗ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.