ADVERTISEMENT

ಮೊದಲ ಲೆಗ್‌: ಸೆಮಿಫೈನಲ್‌ನಲ್ಲಿ ಎಡವಿದ ವೈಶಾಲಿ

ಪಿಟಿಐ
Published 27 ಜೂನ್ 2020, 6:21 IST
Last Updated 27 ಜೂನ್ 2020, 6:21 IST
ಚೆಸ್– ಪ್ರಾತಿನಿಧಿಕ ಚಿತ್ರ
ಚೆಸ್– ಪ್ರಾತಿನಿಧಿಕ ಚಿತ್ರ   

ಚೆನ್ನೈ: ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್‌ ಆರ್‌.ವೈಶಾಲಿ ಅವರು ಮಹಿಳಾ ಸ್ಪೀಡ್‌ ಚೆಸ್‌ ಚಾಂಪಿಯನ್‌ಷಿಪ್‌ನ ಮೊದಲ ಲೆಗ್‌ನ ಸೆಮಿಫೈನಲ್‌ನಲ್ಲಿ ಎಡವಿದ್ದಾರೆ. ಫಿಡೆ ಚೆಸ್‌ ಡಾಟ್‌ ಕಾಮ್‌ ಆಯೋಜಿರುವ ಆನ್‌ಲೈನ್‌ ಟೂರ್ನಿಯಲ್ಲಿ ಶುಕ್ರವಾರ ಅವರು ಉಕ್ರೇನ್‌ನ ಅನ್ನಾ ಉಷೆನಿನಾ ಎದುರು 4.5–5.5ರಿಂದ ಮಣಿದರು.

ಆರಂಭದ ಹಿನ್ನಡೆಯಿಂದ ಚೇತರಿಸಿಕೊಂಡ ಉಷೆನಿನಾ ಅವರು, ಪಂದ್ಯದ ಬುಲೆಟ್‌ ವಿಭಾಗದಲ್ಲಿ ಮೇಲುಗೈ ಸಾಧಿಸಿದರು. ಉಷೆನಿನಾ ಈ ಹಿಂದೆ ವಿಶ್ವ ಚಾಂಪಿಯನ್‌ ಕೂಡ ಆಗಿದ್ದಾರೆ.

ಯುವ ಪ್ರತಿಭೆ ಆರ್‌.ಪ್ರಗ್ಯಾನಂದ ಅವರ ಹಿರಿಯ ಸಹೋದರಿಯಾಗಿರುವ ವೈಶಾಲಿ ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಇಂಟರ್‌ನ್ಯಾಷನಲ್ ಮಾಸ್ಟರ್ ಮಂಗೋಲಿಯಾದ ಮುಂಕ್ಸುಲ್ ತುರ್ಮುಕ್ ಎದುರು ಗೆದ್ದಿದ್ದರು. ಮೊದಲ ಸುತ್ತಿನಲ್ಲಿ ಅಂಟಾವೊನೆಟಾ ಸ್ಟೆಫಾನೊವಾ ಅವರಿಗೆ ಆಘಾತ ನೀಡಿದ್ದರು.

ADVERTISEMENT

ಟೂರ್ನಿಯ ಇನ್ನೂ ಎರಡು ಲೆಗ್‌ಗಳಲ್ಲಿ ವೈಶಾಲಿ ಆಡಲಿದ್ದಾರೆ.

ನಾಲ್ಕು ಲೆಗ್‌ಗಳ‌ ಗ್ರ್ಯಾಂಡ್‌ ಪ್ರಿ ಟೂರ್ನಿಯಲ್ಲಿ 21 ಸ್ಪರ್ಧಿಗಳಿದ್ದಾರೆ. ನಾಲ್ಕು ಲೆಗ್‌ಗಳ ಪೈಕಿ ಪ್ರತಿ ಸ್ಪರ್ಧಿಗಳು ಮೂರು ಲೆಗ್‌ನಲ್ಲಿ ಆಡಲಿದ್ದಾರೆ.

ಪ್ರತಿಯೊಂದು ಗ್ರ್ಯಾಂಡ್‌ ಪ್ರಿ 16 ಆಟಗಾರರನ್ನೊಳಗೊಂಡ ನಾಕೌಟ್‌ ಸ್ಪರ್ಧೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.