ADVERTISEMENT

ಎಫ್‌ಐಎಚ್‌ ನೇಷನ್ಸ್ ಕಪ್ ಮಹಿಳಾ ಹಾಕಿ: ಭಾರತಕ್ಕೆ ಕೆನಡಾ ಮೊದಲ ಎದುರಾಳಿ

ಪಿಟಿಐ
Published 5 ಸೆಪ್ಟೆಂಬರ್ 2022, 15:47 IST
Last Updated 5 ಸೆಪ್ಟೆಂಬರ್ 2022, 15:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಾಸನ್‌: ಭಾರತ ಮಹಿಳಾ ಹಾಕಿ ತಂಡವು ಎಫ್ಐಎಚ್‌ ನೇಷನ್ಸ್ ಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಕೆನಡಾ ಸವಾಲು ಎದುರಿಸಲಿದೆ. ಸ್ಪೇನ್‌ನ ವೆಲೆನ್ಸಿಯಾದಲ್ಲಿ ಡಿಸೆಂಬರ್ 11ರಿಂದ 17ರವರೆಗೆ ಈ ಟೂರ್ನಿ ನಡೆಯಲಿದೆ.

ಭಾರತ ತಂಡವು ಬಿ ಗುಂಪಿನಲ್ಲಿದೆ. ಕೆನಡಾ, ಜಪಾನ್‌ ಮತ್ತು ದಕ್ಷಿಣ ಆಫ್ರಿಕಾ ಈ ಗುಂಪಿನ ಇನ್ನುಳಿದ ತಂಡಗಳು. ಎಂಟು ರಾಷ್ಟ್ರಗಳು ಪಾಲ್ಗೊಳ್ಳುವ ಈ ಟೂರ್ನಿಯು ಮುಂದಿನ ಆವೃತ್ತಿಯ ಎಫ್‌ಐಎಚ್‌ ಪ್ರೊ ಲೀಗ್‌ಗೆ ಅರ್ಹತಾ ಟೂರ್ನಿಯಾಗಿದೆ.

ಟೂರ್ನಿಯ ಮೊದಲ ದಿನ ಕೆನಡಾ ವಿರುದ್ಧ ಆಡಲಿರುವ ಭಾರತ, 12 ಮತ್ತು 14ರಂದು ಕ್ರಮವಾಗಿ ಜಪಾನ್‌ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.