ADVERTISEMENT

Asian Games: 10 ಮೀ ಏರ್ ರೈಫಲ್ ಶೂಟಿಂಗ್‌ನಲ್ಲಿ ಭಾರತದ ಮಹಿಳಾ ತಂಡಕ್ಕೆ ಬೆಳ್ಳಿ

ಪಿಟಿಐ
Published 24 ಸೆಪ್ಟೆಂಬರ್ 2023, 4:52 IST
Last Updated 24 ಸೆಪ್ಟೆಂಬರ್ 2023, 4:52 IST
   

ಹಾಂಗ್‌ಝೌ: 10 ಮೀ ಏರ್ ರೈಫಲ್ ಶೂಟಿಂಗ್‌ನಲ್ಲಿ ಭಾರತದ ಮಹಿಳೆಯರ ತಂಡವು ಬೆಳ್ಳಿ ಪದಕ ಜಯಿಸುವ ಮೂಲಕ ಭಾರತದ ಶೂಟರ್‌ಗಳು ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪದಕದ ಖಾತೆ ತೆರೆದಿದ್ದಾರೆ.

ಅನುಭವಿ ಮೆಹುಲಿ ಘೋಷ್, ರಮಿತಾ ಜಿಂದಾಲ್ ಮತ್ತು ಆಶಿ ಚೌಕ್ಸೆ ಅವರು ಒಟ್ಟಾರೆ 1,886.0 ಅಂಕ ಗಳಿಸುವ ಮೂಲಕ ಚೀನಾದ ನಂತರ ಎರಡನೇ ಸ್ಥಾನವನ್ನು ಗಳಿಸಿದರು. ಚೀನಾ ಶೂಟರ್‌ಗಳು 1,896.6 ಅಂಕಗಳೊಂದಿಗೆ ಏಷ್ಯಾದ ದಾಖಲೆಯನ್ನು ಮುರಿದರು.

ಮಹಿಳೆಯರ 10 ಮೀಟರ್ ಏರ್ ರೈಫಲ್ ವೈಯಕ್ತಿಕ ಪದಕದ ಸ್ಪರ್ಧೆಯಲ್ಲೂ ಭಾರತದ ನಿರೀಕ್ಷೆ ಹೆಚ್ಚಿದೆ. ಏಕೆಂದರೆ ಮೆಹುಲಿ ಮತ್ತು ರಮಿತಾ ಕೂಡ ಫೈನಲ್‌ಗೆ ತಲುಪಿದ್ದಾರೆ.

ADVERTISEMENT

ಅರ್ಹತಾ ಸುತ್ತಿನಲ್ಲಿ, ಕೇವಲ 19 ವರ್ಷ ವಯಸ್ಸಿನ ರಮಿತಾ 631.9 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಗಳಿಸಿದರೆ, ಮೆಹುಲಿ 630.8 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರು.

ಚೀನಾದ ಶೂಟರ್‌ಗಳಾದ ಹಾನ್ ಜಿಯಾಯು, ಹುವಾಂಗ್ ಯುಟಿಂಗ್ ಮತ್ತು ವಾಂಗ್ ಝಿಲಿನ್ ಹಾಗೂ ದಕ್ಷಿಣ ಕೊರಿಯಾದ ಲೀ ಯುನ್‌ಸಿಯೊ, ಮಂಗೋಲಿಯಾದ ಗನ್‌ಹುಯಾಗ್ ನಂದಿನ್‌ಜಾಯಾ ಮತ್ತು ತೈಪೆಯ ಚೆನ್ ಚಿ ಅವರು ಫೈನಲ್‌ಗೆ ಪ್ರವೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.