ADVERTISEMENT

ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌: ಭಾರತ ತಂಡಕ್ಕೆ ಚಿನ್ನ

ಫೈನಲ್‌ನಲ್ಲಿ ಮೆಕ್ಸಿಕೊ ಮೇಲೆ ಗೆಲುವು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2023, 13:22 IST
Last Updated 4 ಆಗಸ್ಟ್ 2023, 13:22 IST
ಜ್ಯೋತಿ ಸುರೇಖಾ ವೆನ್ನಮ್‌– ವಿಶ್ವ ಆರ್ಚರಿ ಟ್ವಿಟರ್‌ ಚಿತ್ರ
ಜ್ಯೋತಿ ಸುರೇಖಾ ವೆನ್ನಮ್‌– ವಿಶ್ವ ಆರ್ಚರಿ ಟ್ವಿಟರ್‌ ಚಿತ್ರ   

ಬರ್ಲಿನ್‌ (ಪಿಟಿಐ): ಭಾರತದ ಮಹಿಳಾ ಆರ್ಚರಿ ತಂಡ, ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನ ಕಾಂಪೌಂಡ್‌ ವಿಭಾಗದ ಫೈನಲ್‌ನಲ್ಲಿ ಮೆಕ್ಸಿಕೊ ತಂಡವನ್ನು ಸೋಲಿಸಿ ಶುಕ್ರವಾರ ಚಿನ್ನದ ಪದಕ ಗೆದ್ದುಕೊಂಡಿತು.

ಜ್ಯೋತಿ ಸುರೇಖಾ ವೆನ್ನಂ, ಅದಿತಿ ಸ್ವಾಮಿ ಮತ್ತು ಪ್ರಣೀತ್ ಕೌರ್ ಅವರನ್ನು ಒಳಗೊಂಡ ತಂಡ 235–229 ಪಾಯಿಂಟ್‌ಗಳಿಂದ ಫೈನಲ್ ಪಂದ್ಯ ಜಯಿಸಿತು. ಇದಕ್ಕೆ ಮೊದಲು ಭಾರತ ತಂಡ ಸೆಮಿಫೈನಲ್‌ನಲ್ಲಿ 220–216 ರಿಂದ ಕೊಲಂಬಿಯಾ ತಂಡವನ್ನು ಸೋಲಿಸಿತ್ತು. ಕ್ವಾರ್ಟರ್‌ಫೈನಲ್‌ನಲ್ಲಿ 228–226 ರಿಂದ ಚೀನಾ ತೈಪೆ ಮೇಲೆ ಜಯಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT