ADVERTISEMENT

ಐಟಿಟಿಎಫ್‌ ರ‍್ಯಾಂಕಿಂಗ್‌: ಮಣಿಕಾ, ಸತ್ಯನ್‌ಗೆ ಬಡ್ತಿ

ಪಿಟಿಐ
Published 3 ಮೇ 2022, 14:28 IST
Last Updated 3 ಮೇ 2022, 14:28 IST
ಮಣಿಕಾ ಬಾತ್ರಾ ಮತ್ತು ಜಿ.ಸತ್ಯನ್‌– ಎಎಫ್‌ಪಿ ಚಿತ್ರ
ಮಣಿಕಾ ಬಾತ್ರಾ ಮತ್ತು ಜಿ.ಸತ್ಯನ್‌– ಎಎಫ್‌ಪಿ ಚಿತ್ರ   

ನವದೆಹಲಿ: ಪಾಯಿಂಟ್ಸ್ ಪದ್ಧತಿಯಲ್ಲಿ ಬದಲಾವಣೆ ತಂದ ಬಳಿಕ ಮಣಿಕಾ ಬಾತ್ರಾ ಸೇರಿದಂತೆ ಭಾರತದ ಟೇಬಲ್ ಟೆನಿಸ್ ಪಟುಗಳು ಐಟಿಟಿಎಫ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾರಿ ಪ್ರಗತಿ ಸಾಧಿಸಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮಣಿಕಾ ಜೀವನಶ್ರೇಷ್ಠ 38ನೇ ಸ್ಥಾನಕ್ಕೆ ತಲುಪಿದ್ದರೆ, ಜಿ.ಸತ್ಯನ್ ಪುರುಷರ ವಿಭಾಗದಲ್ಲಿ 34ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಕಳೆದ ವಾರ ತಮ್ಮ 10ನೇ ರಾಷ್ಟ್ರೀಯ ಪ್ರಶಸ್ತಿಗೆ ಮುತ್ತಿಕ್ಕಿದ ಅನುಭವಿ ಆಟಗಾರ ಅಚಂತ ಶರತ್ ಕಮಲ್‌ 37ನೇ ಸ್ಥಾನಕ್ಕೇರಿದ್ದಾರೆ. ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದ ಶ್ರೀಜಾ ಅಕುಲಾ 39 ಸ್ಥಾನಗಳ ಏರಿಕೆ ಕಂಡು 68ನೇ ಸ್ಥಾನಕ್ಕೆ ತಲುಪಿದ್ದಾರೆ.

ADVERTISEMENT

ಕರ್ನಾಟಕದ ಅರ್ಚನಾ ಕಾಮತ್‌ 92ನೇ ಸ್ಥಾನದಿಂದ 66ನೇ ಸ್ಥಾನಕ್ಕೆ, ರೀತ್ ಟೆನಿಸನ್‌ 97ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಜಿ.ಸತ್ಯನ್– ಹರ್ಮೀತ್ ದೇಸಾಯಿ 28ನೇ ಸ್ಥಾನಕ್ಕೆ, ಸತ್ಯನ್– ಶರತ್‌ 35ನೇ ಸ್ಥಾನಕ್ಕೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.