ADVERTISEMENT

ಅಲ್ಟಿಮೇಟ್‌ ಕೊಕ್ಕೊ: ವಿದೇಶಿ ಆಟಗಾರರಿಗೂ ಅವಕಾಶ

ಪಿಟಿಐ
Published 13 ಜೂನ್ 2025, 16:16 IST
Last Updated 13 ಜೂನ್ 2025, 16:16 IST
ಭಾರತ ಕೊಕ್ಕೊ ಫೆಡರೇಷನ್
ಭಾರತ ಕೊಕ್ಕೊ ಫೆಡರೇಷನ್   

ಗುರುಗ್ರಾಮ: ಅಲ್ಟಿಮೇಟ್‌ ಕೊಕ್ಕೊ ಲೀಗ್‌ ಮೂರನೇ ಆವೃತ್ತಿಯು ನವೆಂಬರ್‌ 29ರಂದು ಆರಂಭವಾಗಲಿದೆ. ಈ ಸಲದ ಲೀಗ್‌ನಲ್ಲಿ ವಿದೇಶಿ ಆಟಗಾರರಿಗೂ ಆಡುವ ಅವಕಾಶ ನೀಡಲಾಗುವುದು ಎಂದು ಭಾರತ ಕೊಕ್ಕೊ ಫೆಡರೇಷನ್ (ಕೆಕೆಎಫ್‌ಐ) ತಿಳಿಸಿದೆ.

‘ಇದೇ ಮೊದಲ ಬಾರಿಗೆ, ಲೀಗ್‌ನಲ್ಲಿ ಆಡಲು ವಿದೇಶಿ ಆಟಗಾರರಿಗೆ ಅನುವು ಮಾಡಿಕೊಡಲು ನಿರ್ಧರಿಸಲಾಗಿದೆ. ಲೀಗ್‌ ಅನ್ನು ಜಾಗತಿಕವಾಗಿ ಮತ್ತಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಕೆಕೆಎಫ್‌ಐ ಅಧ್ಯಕ್ಷ ಸುಧಾಂಶು ಮಿತ್ತಲ್‌ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2022–23ರಲ್ಲಿ ಆರಂಭವಾಗಿದ್ದ ಚೊಚ್ಚಲ ಅಲ್ಟಿಮೇಟ್‌ ಕೊಕ್ಕೊ ಲೀಗ್‌ನಲ್ಲಿ ಒಡಿಶಾ ಜಗರ್‌ನಟ್ಸ್ ಹಾಗೂ ಎರಡನೇ ಆವೃತ್ತಿಯಲ್ಲಿ ಗುಜರಾತ್‌ ಜೈಂಟ್ಸ್‌ ಚಾಂಪಿಯನ್ ಆಗಿದ್ದವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.