ನವದೆಹಲಿ: ವಿಶ್ವದ ನಂ.1 ಕುಸ್ತಿಪಟು ಬಜರಂಗ್ ಪೂನಿಯಾ ಅವರು ಪೋಗಟ್ ಕುಟುಂಬದ ಕುಸ್ತಿಪಟು ಸಂಗೀತಾ ಅವರನ್ನು ವರಿಸಲಿದ್ದಾರೆ ಎಂದು ವರದಿಯಾಗಿದೆ.
‘ದಂಗಲ್' ಸಿನೆಮಾದಿಂದ ಖ್ಯಾತರಾಗಿರುವ ಕುಸ್ತಿಪಟು ಮಹಾವೀರ್ ಪೋಗಟ್‌ರ ಕೊನೆಯ ಪುತ್ರಿಯಾಗಿರುವ ಸಂಗೀತಾ, 59 ಕೆಜಿ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಬಜರಂಗ್ 65 ಕೆಜಿ ವಿಭಾಗದಲ್ಲಿ ವಿಶ್ವದಲ್ಲಿ ಅಗ್ರಸ್ಥಾನದಲಿದ್ದು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ಪಟುವಾಗಿದ್ದಾರೆ.
ಮಹಾವೀರ್ ಪೋಗಟ್ ಅವರು ವಿಷಯವನ್ನು ಖಚಿತಪಡಿಸಿದ್ದಾರೆ. ‘ಸಂಗೀತಾ ಹಾಗೂ ಬಜರಂಗ್ ಮೂರು ವರ್ಷಗಳಿಂದ ಆತ್ಮೀಯರಾಗಿದ್ದಾರೆ. ಅವರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ.ಟೋಕಿಯೊ ಒಲಿಂಪಿಕ್ಸ್ ಬಳಿಕ ವಿವಾಹ ನೆರವೇರುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.