ADVERTISEMENT

ಐಒಎಗೆ ಕಾರ್ಯದರ್ಶಿ ಬದಲು ಸಿಇಒ: ಐಒಸಿ ಪ್ರಸ್ತಾವ

ಪಿಟಿಐ
Published 9 ಅಕ್ಟೋಬರ್ 2022, 6:11 IST
Last Updated 9 ಅಕ್ಟೋಬರ್ 2022, 6:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತ ಒಲಿಂಪಿಕ್‌ ಸಂಸ್ಥೆಯು (ಐಒಎ) ‘ಚುನಾಯಿತ ಮಹಾಪ್ರಧಾನ ಕಾರ್ಯದರ್ಶಿ’ ಬದಲು ‘ನೇಮಕಗೊಂಡ ಸಿಇಒ’ ಅವರನ್ನು ಹೊಂದಿರಬೇಕು ಎಂಬ ಪ್ರಸ್ತಾವವನ್ನು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಮುಂದಿಟ್ಟಿದೆ.

ಐಒಎಯ ಪ್ರತಿನಿಧಿಗಳು ಇತ್ತೀಚೆಗೆ ಸ್ವಿಟ್ಜರ್‌ಲೆಂಡ್‌ನ ಲಾಸನ್‌ನಲ್ಲಿ ಐಒಸಿ ಮತ್ತು ಏಷ್ಯಾ ಒಲಿಂಪಿಕ್‌ ಸಮಿತಿಯ ಅಧಿಕಾರಿಗಳ ಜತೆಗೆ ನಡೆಸಿದ ಸಭೆಯ ವೇಳೆ ಈ ಪ್ರಸ್ತಾವ ಮುಂದಿಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಒಲಿಂಪಿಕ್‌ ಚಿನ್ನದ ಪದಕ ವಿಜೇತ ಶೂಟರ್‌ ಅಭಿನವ್‌ ಬಿಂದ್ರಾ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕಾರಿ ಸಮಿತಿಯು ಕಾರ್ಯದರ್ಶಿಯನ್ನು ಆಯ್ಕೆ ಮಾಡುವ ಬದಲು ಸಿಇಒ ಅವರನ್ನು ನೇಮಿಸಬೇಕು ಎಂಬುದು ಐಒಸಿ ಮುಂದಿಟ್ಟಿರುವ ಪ್ರಮುಖ ಪ್ರಸ್ತಾವಗಳಲ್ಲಿ ಒಂದಾಗಿದೆ.

ADVERTISEMENT

ಐಒಸಿಯ ಮಾರ್ಗಸೂಚಿಗಳ ಪ್ರಕಾರ ಸ್ವತಂತ್ರ ನೀತಿಸಂಹಿತೆ ಸಮಿತಿ ಮತ್ತು ಸರಿಯಾಗಿ ಕಾರ್ಯನಿರ್ವಹಿಸುವ ಅಥ್ಲೀಟ್‌ಗಳ ಸಮಿತಿಯನ್ನೂ ಹೊಂದಿರಬೇಕು ಎಂದು ಐಒಸಿಯು ಸೂಚಿಸಿದೆ.

ಡಿಸೆಂಬರ್‌ ಒಳಗಾಗಿ ಚುನಾವಣೆ ನಡೆಸಿ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರದಿದ್ದರೆ, ಐಒಎಯನ್ನು ಅಮಾನತು ಮಾಡುವುದಾಗಿ ಐಒಸಿ ಸೆ.8 ರಂದು ಅಂತಿಮ ಎಚ್ಚರಿಕೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.