ನವದೆಹಲಿ: ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್) ಬಿಕ್ಕಟ್ಟನ್ನು ಸುಪ್ರೀಂ ಕೋರ್ಟ್ ಮುಂದೆ ಪ್ರಸ್ತಾಪಿಸಲು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್ಎಫ್) ಸಿದ್ಧತೆ ನಡೆಸಿದೆ.
ಎಐಎಫ್‌ಎಫ್ ಸಂವಿಧಾನದ ಕರಡುವಿಗೆ ಸಂಬಂಧಿಸಿದಂತೆ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದ್ದು, ಈ ಕುರಿತ ವಿಚಾರಣೆ ಸೋಮವಾರ ನಿಗದಿಯಾಗಿದೆ. ಅಂದು ಐಎಸ್‌ಎಲ್ ಸಮಸ್ಯೆ ಕುರಿತು ಪ್ರಸ್ತಾಪಿಸಲಿದೆ.
ಎಐಎಫ್‌ಎಫ್ ಮತ್ತು ಲೀಗ್ ಆಯೋಜಕ ಎಫ್‌ಎಸ್‌ಡಿಎಲ್ ನಡುವೆ ಮಾಸ್ಟರ್ ರೈಟ್ಸ್ ಒಪ್ಪಂದ ನವೀಕರಣಕ್ಕೆ ಸಂಬಂಧಿಸಿದ ಗೊಂದಲ ಬಗೆಹರಿ ದಿಲ್ಲದ ಕಾರಣ ಲೀಗ್ ಅನಿಶ್ಚಿತ ವಾಗಿದೆ. ಮತ್ತೊಂದೆಡೆ ಬಿಕ್ಕಟ್ಟು ಶಮನ ಆಗುವವರೆಗೆ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯ ವೇತನವನ್ನು ಕ್ಲಬ್‌ಗಳು ತಡೆಹಿಡಿದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.