ADVERTISEMENT

ಐಎಸ್‌ಎಸ್‌ಎಫ್‌ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌: ಭಾರತಕ್ಕೆ ಬೆಳ್ಳಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 7:13 IST
Last Updated 8 ಜೂನ್ 2023, 7:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೂಲ್, (ಜರ್ಮನಿ): ಭಾರತ ಪುರುಷರ ತಂಡ ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ನ  25 ಮೀ. ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ನಲ್ಲಿ ಬೆಳ್ಳಿ ಜಯಿಸಿತು.

ಸಮೀರ್‌, ರಾಜಕುಮಾರ್‌ ಸಿಂಗ್‌ ಸಂಧು ಮತ್ತು ಜತಿನ್‌ ಅವರನ್ನೊಳಗೊಂಡ ಭಾರತ ತಂಡ ಒಟ್ಟು 1,722 ಪಾಯಿಂಟ್ಸ್‌ ಕಲೆಹಾಕಿತು. 1,728 ಪಾಯಿಂಟ್ಸ್‌ ಸಂಗ್ರಹಿಸಿದ ಕೊರಿಯಾ ಚಿನ್ನ ಗೆದ್ದಿತು.

ಸಮೀರ್‌ ಅವರ ವೈಯಕ್ತಿಕ ವಿಭಾಗದಲ್ಲೂ ಬೆಳ್ಳಿ ಜಯಿಸಿದರೆ, ಮಹೇಶ್‌ ಆನಂದ್‌ಕುಮಾರ್‌ ಅವರು ಕಂಚು ಪಡೆದರು. ಚಿನ್ನದ ಪದಕ ಫ್ರಾನ್ಸ್‌ನ  ಯಾನ್ ಚೆಸ್ನೆಲ್‌ ಪಾಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.