ADVERTISEMENT

ವಿಶ್ವಕಪ್ ಶೂಟಿಂಗ್‌: ರುದ್ರಾಂಕ್ಷ್‌ ಮುನ್ನಡೆ

ಪಿಟಿಐ
Published 28 ಮೇ 2022, 17:41 IST
Last Updated 28 ಮೇ 2022, 17:41 IST

ನವದೆಹಲಿ: ಭಾರತದ ರುದ್ರಾಂಕ್ಷ್‌ಬಾಳಾಸಾಹೇಬ್ ಪಾಟೀಲ್‌ ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್‌ನಲ್ಲಿ ಎಂಟರಘಟ್ಟ ತಲುಪಿದ್ದಾರೆ.

ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆಯುತ್ತಿರುವ ಟೂರ್ನಿಯ 10 ಮೀಟರ್ಸ್ ಏರ್ ರೈಫಲ್‌ ಸ್ಪರ್ಧೆಯಲ್ಲಿ ಅವರು ಅಗ್ರ ಎಂಟು ಮಂದಿಯಲ್ಲಿ ಸ್ಥಾನ ಪಡೆದರು. ಅಂತಿಮ ಸುತ್ತಿನ ಪಂದ್ಯಗಳು ಭಾನುವಾರ ನಡೆಯಲಿವೆ.

ಜೂನಿಯರ್ ವಿಶ್ವಕಪ್‌ನಲ್ಲಿ ತೋರಿದ ಉತ್ತಮ ಲಯವನ್ನು ಇಲ್ಲಿಯೂ ಮುಂದುವರಿಸಿದ ರುದ್ರಾಂಕ್ಷ್‌ ಅರ್ಹತಾ ಸುತ್ತಿನಲ್ಲಿ ನಾಲ್ಕನೇ ಸ್ಥಾನ ಗಳಿಸಿದರು. ದೀಪಕ್ ಕುಮಾರ್ 15ನೇ ಸ್ಥಾನ ಪಡೆದರೆ, ಪಾರ್ಥ್ ಮಖೀಜಾ ಮತ್ತು ಧನುಷ್ ಶ್ರೀಕಾಂತ್ ಕ್ರಮವಾಗಿ 26 ಮತ್ತು 35ನೇ ಸ್ಥಾನಗಳಿಗೆ ಸಮಾಧಾನಪಟ್ಟುಕೊಂಡರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.