
ಪ್ರಜಾವಾಣಿ ವಾರ್ತೆ
ದಕ್ಷಿಣ ವಲಯ ಅಂತರ ವಿ.ವಿ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜೈನ್ ವಿಶ್ವವಿದ್ಯಾಲಯ ಪುರುಷರ ತಂಡ. (ನಿಂತವರು)
ಬೆಂಗಳೂರು: ನಗರದ ಜೈನ್ ವಿಶ್ವವಿದ್ಯಾಲಯದ ಪುರುಷರ ತಂಡವು ಚೆನ್ನೈನ ಸತ್ಯಭಾಮ ವಿಶ್ವವಿದ್ಯಾಲಯದಲ್ಲಿ ಸೋಮವಾರ ಮುಕ್ತಾಯಗೊಂಡ ದಕ್ಷಿಣ ವಲಯ ಅಂತರ ವಿ.ವಿ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಫೈನಲ್ ಹಣಾಹಣಿಯಲ್ಲಿ ಜೈನ್ ತಂಡವು 1–0 ಗೋಲಿನಿಂದ ತಮಿಳುನಾಡಿನ ತಿರುನಲ್ವೇಲಿ ಎಂ.ಎಸ್. ವಿ.ವಿ ತಂಡವನ್ನು ಮಣಿಸಿತು. ಈ ಗೆಲುವಿನೊಂದಿಗೆ ಜೈನ್ ವಿವಿ ಹಾಕಿ ತಂಡವು ಅಖಿಲ ಭಾರತ ವಿಶ್ವವಿದ್ಯಾಲಯ ಹಾಕಿ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.