ಟೋಕಿಯೊ: ಒಲಿಂಪಿಕ್ಸ್ ಕೂಟವನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಜಪಾನ್ ಸರ್ಕಾರವು ಕೋವಿಡ್–19ಕ್ಕೆ ಸಂಬಂಧಿಸಿದ ನಿಯಮಗಳನ್ನು ಇನಷ್ಟು ಕಟ್ಟುನಿಟ್ಟಾಗಿ ಜಾರಿ ಮಾಡುವ ಚಿಂತನೆಯಲ್ಲಿದೆ.
ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆಗಸ್ಟ್ 8ರವರೆಗೆ ನಿಗದಿಯಾಗಿದೆ. ಜಪಾನ್‌ನಲ್ಲಿ ಲಸಿಕೆ ನೀಡುವ ಅಭಿಯಾನ ನಿಧಾನಗತಿಯಲ್ಲಿ ಸಾಗುತ್ತಿದೆ. ಇನ್ನೂ ಹಲವು ನಾಗರಿಕರು ಲಸಿಕೆ ಪಡೆದುಕೊಂಡಿಲ್ಲ.
ಬಾರ್‌ಗಳು ಹಾಗೂ ರೆಸ್ಟೋರೆಂಟ್‌ಗಳ ಕಾರ್ಯನಿರ್ವಹಣಾ ಅವಧಿಯನ್ನು ಕಡಿತಗೊಳಿಸುವುದು, ಕೋವಿಡ್ ನಿಯಮಗಳನ್ನು ಉಲ್ಲಂಘಿಸುವ ನಾಗರಿಕರಿಗೆ ಶಿಕ್ಷೆ ಮುಂತಾದ ಕ್ರಮಗಳನ್ನು ಕಡ್ಡಾಯಗೊಳಿಸಲು ಟೋಕಿಯೊ ರಾಜ್ಯಪಾಲರಿಗೆ ಪ್ರಧಾನ ಮಂತ್ರಿ ಯೋಶಿಹಿದೆ ಸುಗಾ ಸೂಚಿಸಿದ್ದಾರೆ. ಸೋಮವಾರದಿಂದ ಮೇ 11ರವರೆಗೆ ಈ ಕ್ರಮಗಳು ಜಾರಿಯಲ್ಲಿರಲಿವೆ.
ನಗರದಲ್ಲಿ ಇತ್ತೀಚೆಗೆಮಧ್ಯರಾತ್ರಿಯ ಜೀವನಶೈಲಿ ಕಾರಣದಿಂದ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಆದರೂ ಕಚೇರಿಗಳು, ವೃದ್ಧಾಶ್ರಮಗಳು, ಶಾಲೆಗಳಲ್ಲಿ ಪ್ರಕರಣಗಳು ವ್ಯಾಪಿಸಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.