ADVERTISEMENT

ಜಪಾನ್‌ ಓಪನ್‌ ಬ್ಯಾಡ್ಮಿಂಟನ್: ಪ್ರಣಯ್‌ಗೆ ಸೋಲು

ಪಿಟಿಐ
Published 2 ಸೆಪ್ಟೆಂಬರ್ 2022, 13:39 IST
Last Updated 2 ಸೆಪ್ಟೆಂಬರ್ 2022, 13:39 IST
ಎಚ್‌.ಎಸ್‌. ಪ್ರಣಯ್ ಆಟದ ರೀತಿ– ಎಎಫ್‌ಪಿ ಚಿತ್ರ
ಎಚ್‌.ಎಸ್‌. ಪ್ರಣಯ್ ಆಟದ ರೀತಿ– ಎಎಫ್‌ಪಿ ಚಿತ್ರ   

ಒಸಾಕ: ಜಪಾನ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಎಚ್‌.ಎಸ್‌. ಪ್ರಣಯ್‌ ಅವರ ಸವಾಲು ಕೊನೆಗೊಂಡಿದೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪ್ರಣಯ್‌ 17–21, 21–15, 20–22ರಿಂದ ಚೀನಾ ತೈಪೆಯ ಚೊ ಟಿಯೆನ್ ಚೆನ್‌ ವಿರುದ್ಧ ಪರಾಭವಗೊಂಡರು.

ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ಪ್ರಣಯ್‌ ಎದುರು ಚೆನ್‌ ಒಂದು ತಾಸು 20 ನಿಮಿಷಗಳ ಹಣಾಹಣಿಯಲ್ಲಿ ಸೋಲೊಪ್ಪಿಕೊಂಡರು. ಮೊದಲ ಗೇಮ್‌ನಲ್ಲಿ ಸೋತ ಭಾರತದ ಆಟಗಾರ, ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿದರು. ಜಿದ್ದಾಜಿದ್ದಿನ ನಿರ್ಣಾಯಕ ಗೇಮ್‌ನಲ್ಲಿ ಎಡವಿದರು.

ADVERTISEMENT

ಪಂದ್ಯದಲ್ಲಿ ಪ್ರಣಯ್, ಉತ್ತಮ ರ‍್ಯಾಲಿಗಳನ್ನು ಆಡಿದರು. ಆದರೆ ಸ್ವಯಂಕೃತ ತಪ್ಪುಗಳು ಸೋಲಿಗೆ ಕಾರಣವಾದವು.

ಚೆನ್‌ ವಿರುದ್ಧ ಆಡಿದ್ದ ಈ ಹಿಂದಿನ ಎರಡು ಪಂದ್ಯಗಳಲ್ಲಿ ಪ್ರಣಯ್ ಜಯ ಸಾಧಿಸಿದ್ದರು. ಆದರೆ ಇಲ್ಲಿ ಮುಗ್ಗರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.