ಬೆಂಗಳೂರು: ಬೆಳಗಾವಿಯ ಶುಭಂ ಕುಂಡೇಕರ ಅವರು ರಾಷ್ಟ್ರೀಯ ಜಾವೆಲಿನ್ ದಿನದ ಪ್ರಯುಕ್ತ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆಯು ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಾವೆಲಿನ್ ಥ್ರೋ ಸ್ಪರ್ಧೆಯ 20 ವರ್ಷದೊಳಗಿನವರ ಪುರುಷರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು.
ಶುಭಂ ಅವರು 64.88 ಮೀಟರ್ ಸಾಧನೆ ಮರೆದರು. ಬೆಳಗಾವಿಯ ಮತ್ತೊಬ್ಬ ಸ್ಪರ್ಧಿ ಕಲ್ಲೊಲೆಪ್ಪ ಡಿ ಬಂಡಿವಡ್ಡರ (63.81ಮೀ) ಮತ್ತು ಬೆಂಗಳೂರಿನ ಪವನ್ ಕುಮಾರ್ ಬಿ.ಎಂ. ಕ್ರಮವಾಗಿ ಬೆಳ್ಳಿ ಕಂಚಿನ ಪದಕ ಗೆದ್ದರು.
18 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಉಡುಪಿಯ ರಾಘವೇಂದ್ರ ಆರ್. (60 ಮೀ) ಮತ್ತು ಪುರುಷರ ವಿಭಾಗದಲ್ಲಿ ಬೆಂಗಳೂರಿನ ಸಿ. ಶಿವಮಣಿ (48.12 ಮೀ) ಚಿನ್ನದ ಸಾಧನೆ ಮಾಡಿದರು.
ಫಲಿತಾಂಶ: ಪುರುಷರು: ಸಿ ಶಿವಮಣಿ (ಬೆಂಗಳೂರು, ಎಸೆತ: 48.12 ಮೀ)–1; ವಿ. ವೆಂಕಟೇಶ್ (ಬೆಂಗಳೂರು)– 2; ಮೊಹಮ್ಮದ್ ಅಜೀಜ್ (ಬೆಂಗಳೂರು)– 3. 20 ವರ್ಷದೊಳಗಿನ ಪುರುಷರು: ಶುಭಂ ಕುಂಡೇಕರ್ (ಬೆಳಗಾವಿ, ಎಸೆತ: 64.88 ಮೀ)–1; ಕಲ್ಲೋಲೆಪ್ಪ ಡಿ. ಬಂಡಿವಡ್ಡರ (ಬೆಳಗಾವಿ)–2; ಪವನ್ ಕುಮಾರ ಬಿ.ಎಂ. (ಬೆಂಗಳೂರು)–3. 18 ವರ್ಷದೊಳಗಿನ ಬಾಲಕರು: ರಾಘವೇಂದ್ರ ಆರ್. (ಉಡುಪಿ, ಎಸೆತ: 60 ಮೀ)–1; ಮನೋಜ್ ಎ,ಎಸ್, (ಚಿಕ್ಕಮಗಳೂರು)–2; ಪುನೀತ್ ಗೌಡ (ಬೆಂಗಳೂರು)– 3. 16 ವರ್ಷದೊಳಗಿನ ಬಾಲಕರು: ಕುಶಾನ್ (ಬೆಂಗಳೂರು, ಎಸೆತ 32.03 ಮೀ)–1; ಬಸವರಾಜ (ಬೀದರ್)–2; ಆದರ್ಶ್ ಬಿ.ಎಂ. (ಬೆಂಗಳೂರು)–3.
20 ವರ್ಷದೊಳಗಿನ ಮಹಿಳೆಯರು: ಬಾಳಕ್ಕ ಪಾಟೀಲ (ಬೆಳಗಾವಿ, ಎಸೆತ: 28.85 ಮೀ)–1; ತನ್ಮಯ ಪ್ರಸಾದ್ (ಬೆಂಗಳೂರು)–2; ವರ್ಷಿತಾ ಸಿ. (ಬೆಂಗಳೂರು)–3. 18 ವರ್ಷದೊಳಗಿನ ಬಾಲಕಿಯರು: ಭವ್ಯಾ ಸಿ.ಜೆ. (ಬೆಳಗಾವಿ, ಎಸೆತ: 43.44 ಮೀ)–1; ಗಾಯತ್ರಿ ಜಿ.ಕೆ (ಬೆಳಗಾವಿ)–2; ಶಾರಿಣಿ ಜೆ. (ಬೆಂಗಳೂರು) –3. 16 ವರ್ಷದೊಳಗಿನ ಬಾಲಕಿಯರು: ಸಿಂಚನಾ ಡಿ. (ಬೆಂಗಳೂರು, ಎಸೆತ: 27.59 ಮೀ)–1; ಸಿಂಹಸ್ತಿಹ ಸಿಂಗ್ (ಬೆಂಗಳೂರು)– 2.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.