ADVERTISEMENT

ಸ್ಕ್ವಾಷ್‌: ಪ್ರೀ ಕ್ವಾರ್ಟರ್‌ಗೆ ಜೋಷ್ನಾ

ಪಿಟಿಐ
Published 22 ಮೇ 2019, 18:26 IST
Last Updated 22 ಮೇ 2019, 18:26 IST
ಜೋಷ್ನಾ ಚಿಣ್ಣಪ್ಪ
ಜೋಷ್ನಾ ಚಿಣ್ಣಪ್ಪ   

ಹಲ್‌, ಇಂಗ್ಲೆಂಡ್‌: ಭಾರತದ ಜೋಷ್ನಾ ಚಿಣ್ಣಪ್ಪ ಅವರು ಪಿಎಸ್‌ಎ ವಿಶ್ವ ಟೂರ್‌ ಬ್ರಿಟೀಷ್‌ ಓಪನ್‌ ಸ್ಕ್ವಾಷ್‌ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಮಂಗಳವಾರ ರಾತ್ರಿ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹೋರಾಟದಲ್ಲಿ ಜೋಷ್ನಾ 12–10, 11–3, 11–9 ನೇರ ಗೇಮ್‌ಗಳಿಂದ ಆತಿಥೇಯ ಆಟಗಾರ್ತಿ ಮಿಲ್ಲಿ ಟಾಮ್ಲಿನ್‌ಸನ್‌ ಅವರನ್ನು ಪರಾಭವಗೊಳಿಸಿದರು.

ಟೂರ್ನಿಯಲ್ಲಿ 15ನೇ ಶ್ರೇಯಾಂಕ ಹೊಂದಿರುವ ಭಾರತದ ಆಟಗಾರ್ತಿಗೆ ಮೊದಲ ಸುತ್ತಿನಲ್ಲಿ ‘ಬೈ’ ಸಿಕ್ಕಿತ್ತು.

ADVERTISEMENT

ಗುರುವಾರ ರಾತ್ರಿ ನಡೆಯುವ ಹದಿನಾರರ ಘಟ್ಟದ ಹಣಾಹಣಿಯಲ್ಲಿ ಜೋಷ್ನಾ, ಇಂಗ್ಲೆಂಡ್‌ನ ಆರನೇ ಶ್ರೇಯಾಂಕದ ಆಟಗಾರ್ತಿ ಸಾರಾ ಜೇನ್ ಪೆರ್ರಿ ಎದುರು ಸೆಣಸಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದ ಸೌರವ್‌ ಘೋಷಾಲ್‌ ಮತ್ತು ರಮಿತ್‌ ಟಂಡನ್‌ ಟೂರ್ನಿಯಿಂದ ಹೊರಬಿದ್ದರು.

ಮೊದಲ ಸುತ್ತಿನಲ್ಲಿ ‘ಬೈ’ ಪಡೆದಿದ್ದ ಸೌರವ್‌, ಎರಡನೇ ಸುತ್ತಿನಲ್ಲಿ 9–11, 4–11, 11–7, 6–11ರಲ್ಲಿ ಈಜಿಪ್ಟ್‌ನ ಐದನೇ ಶ್ರೇಯಾಂಕದ ಆಟಗಾರ ಕರೀಂ ಅಬ್ದುಲ್‌ ಗಾವದ್‌ ಎದುರು ಮಣಿದರು.

ಮೊದಲ ಸುತ್ತಿನ ಪೈಪೋಟಿಯಲ್ಲಿ ರಮಿತ್‌ 8–11, 8–11, 1–11 ನೇರ ಗೇಮ್‌ಗಳಿಂದ ಜೇಮ್ಸ್‌ ವಿಲ್ಸ್‌ಟ್ರಾಪ್‌ ವಿರುದ್ಧ ಪರಾಭವಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.