
ಭಾರತ ಜೂನಿಯರ್ ಹಾಕಿ ತಂಡದ ಆಟಗಾರರ ಸಂಭ್ರಮ
– ಪಿಟಿಐ ಚಿತ್ರ
ಚೆನ್ನೈ : ರೋಚಕ ಹೋರಾಟದ ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ ಬೆಲ್ಜಿಯಂ ತಂಡವನ್ನು ಮಣಿಸಿದ ಆತಿಥೇಯ ಭಾರತ ಹಾಕಿ ತಂಡವು ಶುಕ್ರವಾರ ಎಫ್‌ಐಎಚ್ ಜೂನಿಯರ್ ಪುರುಷರ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿತು.
ಮೇಯರ್ ರಾಧಾಕೃಷ್ಣನ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವು ನಿಗದಿತ ಅವಧಿಯಲ್ಲಿ 2–2 ಗೋಲುಗಳಿಂದ ಸಮಬಲಗೊಡಿತ್ತು. ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತದ ಆಟಗಾರರು 4–3ರಿಂದ ಪಾರಮ್ಯ ಮೆರೆದರು.
ಭಾರತದ ಪರ ನಾಯಕ ರೋಹಿತ್ (45ನೇ ನಿಮಿಷ) ಮತ್ತು ತಿವಾರಿ ಶಾರದಾನಂದ್ (48ನೇ) ಗೋಲು ಗಳಿಸಿದ್ದರು. ಬೆಲ್ಜಿಯಂ ಪರ ಕಾರ್ನೆಜ್ ಮ್ಯಾಸಾಂಟ್ ಗ್ಯಾಸ್ಪರ್ಡ್ (13ನೇ) ಮತ್ತು ರೋಗ್ ನಾಥನ್ (59ನೇ) ಚೆಂಡನ್ನು ಗುರಿ ಸೇರಿಸಿದ್ದರು.
ಇತರ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಅರ್ಜೇಟೀನಾ 1–0ರಿಂದ ನೆದರ್ಲೆಂಡ್ಸ್ ವಿರುದ್ಧ; ಸ್ಪೇನ್ 4–3ರಿಂದ ನ್ಯೂಜಿಲೆಂಡ್ ವಿರುದ್ಧ ಗೆದ್ದು ಸೆಮಿಫೈನಲ್ ಪ್ರವೇಶಿಸಿದವು. ಜರ್ಮನಿ ತಂಡವು 3–1ರಿಂದ ಫ್ರಾನ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿ ನಾಲ್ಕರ ಘಟ್ಟ ಪ್ರವೇಶಿಸಿತು. ನಿಗದಿತ ಅವಧಿಯ ಪಂದ್ಯವು 2–2ರಿಂದ ಸಮಬಲಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.