ADVERTISEMENT

ಜೂನಿಯರ್ ಹಾಕಿ: ಆಸ್ಟ್ರೇಲಿಯಕ್ಕೆ ಮಣಿದ ಭಾರತ ವನಿತೆಯರು

ಪಿಟಿಐ
Published 26 ಸೆಪ್ಟೆಂಬರ್ 2025, 13:50 IST
Last Updated 26 ಸೆಪ್ಟೆಂಬರ್ 2025, 13:50 IST
   

ಕೆನ್‌ಬೆರಾ: ಭಾರತ ಜೂನಿಯರ್ ಮಹಿಳಾ ತಂಡದವರು ಹಾಕಿ ಸರಣಿಯ ಮೊದಲ ಪಂದ್ಯದಲ್ಲಿ ಶುಕ್ರವಾರ 2–3 ಗೋಲುಗಳಿಂದ ಆಸ್ಟ್ರೇಲಿಯಾ 21 ವರ್ಷದೊಳಗಿನವರ ತಂಡಕ್ಕೆ ಮಣಿದರು.

ನ್ಯಾಷನಲ್ ಹಾಕಿ ಸೆಂಟರ್‌ನಲ್ಲಿ ನಡೆದ ಈ ಪಂದ್ಯದ ಎಲ್ಲ ಗೋಲುಗಳು ಮಧ್ಯಂತರದ ನಂತರ ಬಂದವು.

ಆಸ್ಟ್ರೇಲಿಯಾ ತಂಡದ ಪರ ಬಿಯಾಂಕಾ ಝುರೆರ್‌ (36ನೇ ನಿಮಿಷ), ಇವೀ ಸ್ರಾನ್ಸ್‌ಬಿ (45ನೇ) ಮತ್ತು ಸ್ಯಾಮಿ ಲೋವ್ (59ನೇ ನಿಮಿಷ) ಗೋಲು ಗಳಿಸಿದರು. ಭಾರತ ತಂಡದ ‍ಪರ ಲಾಲ್ತಂತ್‌ಲುವಾಂಗಿ (47ನೇ ನಿಮಿಷ) ಮತ್ತು ಸೋನಮ್ (54ನೇ ನಿಮಿಷ) ಗೋಲು ಗಳಿಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.