ಹಾಕಿ
ಜಲಂಧರ್: ಕರ್ನಾಟಕ ತಂಡವು ಇಲ್ಲಿ ನಡೆಯುತ್ತಿರುವ 15ನೇ ಹಾಕಿ ಇಂಡಿಯಾ ಜೂನಿಯರ್ ಪುರುಷರ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 2–3ರಿಂದ ಹರಿಯಾಣ ಎದುರು ವೀರೋಚಿತ ಸೋಲು ಕಂಡಿತು.
ಬುಧವಾರ ನಡೆದ ಟೂರ್ನಿಯ ಎಂಟರ ಘಟ್ಟದ ಮೊದಲ ಪಂದ್ಯದಲ್ಲಿ ಹರಿಯಾಣದ ನವರಾಜ್ ಸಿಂಗ್ (6ನೇ ನಿ.) ಹಾಗೂ ಸಚಿನ್ (22ನೇ ನಿ.) ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. ಪುಟಿದೆದ್ದ ಕರ್ನಾಟಕ ತಂಡದ ನಿತೇಶ್ ಶರ್ಮಾ (28ನೇ ನಿ.) ಹಾಗೂ ಸಂಪನ್ ಗಣಪತಿ (43ನೇ ನಿ.) ತಲಾ ಒಂದು ಗೋಲು ಗಳಿಸಿ, ಸಮಬಲ ಸಾಧಿಸಿದರು. ಆದರೆ ಕಡೆಯ ಕ್ಷಣದಲ್ಲಿ ಗೋಲು ಗಳಿಸಿದ ಚಿರಾಗ್ (59ನೇ ನಿ.), ಕರ್ನಾಟಕದ ಸೆಮಿಫೈನಲ್ ಕನಸು ಕಮರುವಂತೆ ಮಾಡಿದರು.
ಉಳಿದಂತೆ, ಹಾಲಿ ಚಾಂಪಿಯನ್ ಪಂಜಾಬ್, ಉತ್ತರ ಪ್ರದೇಶ ಹಾಗೂ ಒಡಿಶಾ ತಂಡಗಳೂ ಅಂತಿಮ ನಾಲ್ಕರ ಸುತ್ತಿಗೆ ಪ್ರವೇಶಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.