ADVERTISEMENT

ಜೂನಿಯರ್ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್ ಟೂರ್ನಿ: ಸಾಯಿ ಸತ್ಯ ಸರ್ವೇಶ್‌ಗೆ ಜಯ

ಅಖಿಲ ಭಾರತ ಜೂನಿಯರ್ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 14:39 IST
Last Updated 12 ಏಪ್ರಿಲ್ 2022, 14:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಸಾಯಿ ಸತ್ಯ ಸರ್ವೇಶ್ ಯಾಕಾಲ ಅವರು ಅಖಿಲ ಭಾರತ ಜೂನಿಯರ್ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಇಲ್ಲಿಯ ಪಡುಕೋಣೆ– ದ್ರಾವಿಡ್‌ ಕ್ರೀಡಾ ಶ್ರೇಷ್ಠತಾ ಕೇಂದ್ರದಲ್ಲಿ ನಡೆಯುತ್ತಿರುವ ಟೂರ್ನಿಯ 19 ವರ್ಷದೊಳಗಿನವರ ವಿಭಾಗದ ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಸರ್ವೇಶ್‌ 21–15, 21–16ರಿಂದ ಜಯಸಮೀರ್ ರೆಡ್ಡಿ ಕಂದ್ರಾಪು ಅವರನ್ನು ಸೋಲಿಸಿದರು.

ನಿಖಿಲ್ ಚೆಟ್ರಿ 21–12, 21–12ರಿಂದ ಪ್ರಣೀತ್ ಸೋಮಾನಿ ವಿರುದ್ಧ, ಸಾತ್ವಿಕ್ ಶಂಕರ್‌ 21–12, 21–14ರಿಂದ ಜೋಮಿ ಸಿಂಗಮ್ ಎದುರು, ಜ್ಞಾನ ಹರ್ಷ ಜೆಟ್ಟಿ 21–13, 12–21, 21–13ರಿಂದ ಜೀತ್ ಪಟೇಲ್ ವಿರುದ್ಧ ಜಯ ಸಾಧಿಸಿದರು.

ADVERTISEMENT

19 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯಗಳಲ್ಲಿ ವಿಜೇತಾ ಹರೀಶ್‌ 21–8, 22–20ರಿಂದ ಪ್ರವೀಣಾ ಮೇರಿ ಜೋಸೆಫ್ ವಿರುದ್ಧ, ಗ್ಲೋರಿಯಾ ಅಟಾವಳೆ 21–16, 21–12ರಿಂದ ಉನ್ನತಿ ಜರಲ್ ಎದುರು, ಉನ್ನತಿ ಹೂಡಾ 19–21, 23–21, 21–18ರಿಂದ ಆಯೇಶಾ ಗಾಂಧಿ ಎದುರು, ಜಿಯಾ ರಾವತ್‌ 21–10, 19–21, 21–12ರಿಂದ ಪ್ರವೀಣಾ ಎಸ್‌. ವಿರುದ್ಧ ಗೆದ್ದು ಎರಡನೇ ಸುತ್ತು ಪ್ರವೇಶಿಸಿದರು.

ಇದೇ 9ರಿಂದ ಅರ್ಹತಾ ಸುತ್ತಿನ ಪಂದ್ಯಗಳು ನಡೆದಿದ್ದವು. ಮಂಗಳವಾರ ಮುಖ್ಯ ಸುತ್ತಿನ ಪಂದ್ಯಗಳು ಆರಂಭವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.