ADVERTISEMENT

ಜೂನಿಯರ್ ಮಹಿಳಾ ಹಾಕಿ: ಭಾರತಕ್ಕೆ ಜಯ

ಪಿಟಿಐ
Published 10 ಡಿಸೆಂಬರ್ 2025, 13:05 IST
Last Updated 10 ಡಿಸೆಂಬರ್ 2025, 13:05 IST
   

ಸ್ಯಾಂಟಿಯಾಗೊ (ಚಿಲಿ): ಗೋಲ್ ಕೀಪರ್ ನಿಧಿ ಅವರ ಉತ್ತಮ ತಡೆಗಳ ನೆರವಿನಿಂದ ಭಾರತ ತಂಡ, ಜೂನಿಯರ್ ಮಹಿಳಾ ವಿಶ್ವಕಪ್ ಹಾಕಿ ಟೂರ್ನಿಯ ಕ್ಲಾಸಿಫಿಕೇಷನ್ ಪಂದ್ಯದಲ್ಲಿ ಉರುಗ್ವೆ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 3–1 ರಿಂದ ಸೋಲಿಸಿತು.

ಮಂಗಳವಾರ ನಡೆದ 9 ರಿಂದ 12ನೇ ಸ್ಥಾನ ನಿರ್ಧಾರಕ್ಕೆ ನಡೆಯುವ ಪಂದ್ಯದಲ್ಲಿ ನಿಗದಿ ಅವಧಿಯ ಆಟ 1–1ರಲ್ಲಿ ಸಮನಾಗಿತ್ತು. ಈ ಗೆಲುವಿನಿಂದಾಗಿ ಭಾರತಕ್ಕೆ ಒಂಬತ್ತನೇ ಸ್ಥಾನದಲ್ಲಿ ಟೂರ್ನಿಯನ್ನು ಮುಗಿಸುವ ಅವಕಾಶ ಒದಗಿದೆ.

ಭಾರತ ತಂಡಕ್ಕೆ 19ನೇ ನಿಮಿಷ ಮನಿಶಾ ಮುನ್ನಡೆ ಒದಗಿಸಿದರೆ, 60ನೇ ನಿಮಿಷ ಜಸ್ಟಿನಾ ಅರೆಗಿ ಉರುಗ್ವೆ ಪರ ಸ್ಕೋರ್ ಸಮ ಮಾಡಿದರು. ಪಂದ್ಯ ಮುಗಿಯುವ ಕೆಲವೇ ಸೆಕೆಂಡುಗಳ ಮೊದಲು ದೊರೆತ ಪೆನಾಲ್ಟಿ ಸ್ಟ್ರೋಕ್‌ ಅವಕಾಶವನ್ನು ಅರೆಗಿ ಗೋಲಾಗಿ ಪರಿವರ್ತಿಸಿದರು.

ADVERTISEMENT

ಪೆನಾಲ್ಟಿ ಶೂಟೌಟ್‌ನಲ್ಲಿ ಪೂರ್ಣಿಮಾ ಯಾದವ್‌, ಇಶಿಕಾ ಮತ್ತು ಕನಿಕಾ ಸಿವಾಚ್‌ ಚೆಂಡನ್ನು ಗುರಿ ಸೇರಿಸಿದರು. ಗೋಲ್‌ ಕೀಪರ್ ನಿಧಿ, ಎದುರಾಳಿ ತಂಡದ ಮೂರು ಗೋಲುಯತ್ನಗಳನ್ನು ತಡೆದು ಗೆಲುವಿಗೆ ಕಾರಣರಾದರು.

ಭಾರತ ತಂಡವು 9–10ನೇ ಸ್ಥಾನ ನಿರ್ಧಾರಕ್ಕೆ ಗುರುವಾರ ನಡೆಯುವ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.