ADVERTISEMENT

ಮೇ 13 ರಿಂದ ಐಐಪಿಕೆಎಲ್

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 20:30 IST
Last Updated 12 ಏಪ್ರಿಲ್ 2019, 20:30 IST

ಮೈಸೂರು: ನ್ಯೂ ಕಬಡ್ಡಿ ಫೆಡರೇಷನ್‌ ಆಯೋಜಿಸಿರುವ ಇಂಡೊ–ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್ (ಐಐಪಿಕೆಎಲ್‌) ಮೊದಲ ಆವೃತ್ತಿಯ ಟೂರ್ನಿಯ ಪಂದ್ಯಗಳು ಮೇ 13 ರಿಂದ ಜೂನ್‌ 4ರ ವರೆಗೆ ನಡೆಯಲಿದೆ.

ಮೂರು ತಾಣಗಳಲ್ಲಿ ಒಟ್ಟು 44 ಪಂದ್ಯಗಳು ನಡೆಯಲಿವೆ. ವಿದೇಶದ 16 ಮಂದಿ ಒಳಗೊಂಡಂತೆ ಒಟ್ಟು 160 ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನ್ಯೂ ಕಬಡ್ಡಿ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಎಂ.ವಿ.ಪ್ರಸಾದ್ ಬಾಬು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪುಣೆ, ಮೈಸೂರು ಮತ್ತು ಬೆಂಗಳೂರಿನಲ್ಲಿ ಮೂರು ಹಂತಗಳಲ್ಲಿ ಟೂರ್ನಿ ಆಯೋಜಿಸಲಾಗಿದೆ. ಮೊದಲ ಹಂತದ 20 ಪಂದ್ಯಗಳು ಮೇ 13 ರಿಂದ 21ರವರೆಗೆ ಪುಣೆಯಲ್ಲಿ ನಡೆಯಲಿವೆ.

ADVERTISEMENT

ಎರಡನೇ ಹಂತದ 17 ಪಂದ್ಯಗಳು ಮೈಸೂರಿನಲ್ಲಿ ಮೇ 24 ರಿಂದ 29ರ ವರೆಗೂ, ಕೊನೆಯ ಏಳು ಪಂದ್ಯಗಳು ಬೆಂಗಳೂರಿನಲ್ಲಿ ಜೂನ್‌ 1 ರಿಂದ ನಡೆಯಲಿವೆ. ಫೈನಲ್‌ ಪಂದ್ಯ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಜೂನ್‌ 4 ರಂದು ನಡೆಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.