ಬೆಂಗಳೂರು: ರೇಡರ್ ಸುನಿಲ್ ಜೈಪಾಲ್ ಅವರ ಮಿಂಚಿನ ಆಟದಿಂದ ದಿಲರ್ ಡೆಲ್ಲಿ ತಂಡ ಇಂಡೊ ಇಂಟರ್‌ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್‌ನ ಹಣಾಹಣಿಯಲ್ಲಿ ಪಾಂಡಿಚೇರಿ ಪ್ರಿಡೇಟರ್ಸ್ ತಂಡವನ್ನು ಮಣಿಸಿತು.
ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ದಿಲರ್ ಡೆಲ್ಲಿ ತಂಡ ಪಾಂಡಿಚೇರಿ ಪ್ರಿಡೆಟರ್ಸ್ ತಂಡವನ್ನು 56-48 ಪಾಯಿಂಟ್‌ಗಳ ಅಂತರದಲ್ಲಿ ಸೋಲಿಸಿ ಏಳನೇ ಗೆಲುವು ದಾಖಲಿಸಿತು.
ಡೆಲ್ಲಿ ತಂಡ ಲೀಗ್ ಹಂತದಲ್ಲಿ ಆಡಿದ ಒಟ್ಟು 10 ಪಂದ್ಯಗಳಿಂದ 15 ಪಾಯಿಂಟ್ ಗಳಿಸಿ ‘ಬಿ’ ಗುಂಪಿ ನಲ್ಲಿ ಅಗ್ರಸ್ಥಾನದೊಂದಿಗೆ ಅಂತಿಮ ನಾಲ್ಕರ ಘಟ್ಟಕ್ಕೆ ಕಾಲಿಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.