ADVERTISEMENT

‘ಪುರಸ್ಕಾರ ಸಂತಸ ತಂದಿದೆ’

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2018, 19:33 IST
Last Updated 28 ನವೆಂಬರ್ 2018, 19:33 IST

ಬೆಂಗಳೂರು: ‘ನಮ್ಮ ರಾಜ್ಯ ಸರ್ಕಾರ ನನ್ನ ಸಾಧನೆಯನ್ನು ಗುರುತಿಸಿದೆ. ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿದೆ. ಇದರಿಂದ ಅಪಾರ ಸಂತಸವಾಗಿದೆ. ಈಗಾಗಲೇ ಹಲವು ಉನ್ನತ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇನೆ. ಆದರೆ ತವರಿನ ಪುರಸ್ಕಾರ ವಿಶೇಷವಾದದ್ದು’ ಎಂದು ಒಲಿಂಪಿಯನ್ ಅಥ್ಲೀಟ್ ಕೆನೆತ್ ಪೊವೆಲ್ ಹೇಳಿದ್ದಾರೆ.

1964 ಒಲಿಂಪಿಕ್ಸ್‌ನ 100 ಮೀಟರ್ಸ್‌ ಓಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಕರ್ನಾಟಕದ ಮೊದಲ ಸ್ಪ್ರಿಂಟರ್ ಎಂಬ ಹೆಗ್ಗಳಿಕೆ ಅವರದ್ದು. ಕೆನೆತ್ ಅವರಿಗೆ ಈಗ 78 ವರ್ಷ.

‘ಈ ಪ್ರಶಸ್ತಿಯನ್ನು ನಿರೀಕ್ಷೆ ಮಾಡಿರ ಲಿಲ್ಲ. ಇದುವರೆಗೂ ಸರ್ಕಾರದಿಂದ ಯಾವುದೇ ಮಾಹಿತಿಯೂ ಬಂದಿಲ್ಲ. ಈಗಷ್ಷೇ ನಿಮ್ಮ ಕರೆಯಿಂದ ತಿಳಿದಿದ್ದು‘ ಎಂದು ಕೆನೆತ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ಭಾರತ ತಂಡವನ್ನು ಪ್ರತಿನಿಧಿಸಿರುವ ಕೊಡಗಿನ ಹಾಕಿ ಆಟಗಾರ ವಿನಯ್ ಮತ್ತು ಕುಬ್ಜರ (ಡ್ವಾರ್ಫ್‌) ವಿಭಾಗದ ಬ್ಯಾಡ್ಮಿಂಟನ್ ಆಟಗಾರ, ಹಾಸನದ ಆರ್. ಚೇತನ್ ಅವರಿಗೂ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.