ಬೆಂಗಳೂರು: ನಾಲ್ವರು ಆಟಗಾರರು, ಗೋಲ್ಡನ್ ಆರಾ ಕರ್ನಾಟಕ ರಾಜ್ಯ ಅಮೆಚೂರ್ ಚೆಸ್ ಚಾಂಪಿಯನ್‌ಷಿಪ್‌ನ ಐದನೇ ಸುತ್ತಿನ ನಂತರ ಸಂಭವನೀಯ ಐದು ಅಂಕಗಳೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.
ಕೋಣನಕುಂಟೆಯ ಪ್ರೆಸ್ಟೀಜ್ ಸೆಂಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ನಾಲ್ಕು ದಿನಗಳ ಈ ಟೂರ್ನಿ ಗುರುವಾರ ಆರಂಭವಾಗಿತ್ತು. 450ಕ್ಕೂ ಹೆಚ್ಚು ಆಟಗಾರರು ಕಣದಲ್ಲಿದ್ದಾರೆ.
ಎರಡನೇ ದಿನದಾಟದ ನಂತರ, ಬೆಂಗಳೂರು ನಗರದ ಎ.ಯುವನೇಶ್, ವೆಂಕಟನಾಗ ಕಾರ್ತಿಕ್ ಮಲ್ಲಾದಿ, ಬೆಂಗಳೂರು ಗ್ರಾಮಾಂತರದ ಇಶಾನ್ ಎ. ಮತ್ತು ಶಶಾಂಕ್ ಸಾವಂತ್ (ಬೆಂಗಳೂರು ನಗರ) ಈ ನಾಲ್ವರು. ಮೊದಲ ಐವರು ಶ್ರೇಯಾಂಕ ಆಟಗಾರರು ಇವರಲ್ಲಿ ಸ್ಥಾನ ಪಡೆದಿಲ್ಲದಿರುವುದು ವಿಶೇಷ.
ಅಗ್ರ ಶ್ರೇಯಾಂಕದ ನಿರಂಜನ್ ಜೆ.ವಾರಿಯರ್, ಎರಡನೇ ಶ್ರೇಯಾಂಕದ ಅಯಾನ್ ಫುಟಾನೆ ಸೇರಿದಂತೆ 15 ಮಂದಿ ಆಟಗಾರರು ತಲಾ 4.5 ಅಂಕ ಸಂಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯ ಚೆಸ್ ಸಂಸ್ಥೆಯು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಬೆಂಬಲದೊಡನೆ ಈ ಚಾಂಪಿಯನ್‌ಷಿಪ್ ಹಮ್ಮಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.