ADVERTISEMENT

ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆ ಅಧ್ಯಕ್ಷರಾಗಿ ಕುಮಾರ್ ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 20:08 IST
Last Updated 28 ಡಿಸೆಂಬರ್ 2025, 20:08 IST
ಕುಮಾರ್ ಬಂಗಾರಪ್ಪ
ಕುಮಾರ್ ಬಂಗಾರಪ್ಪ   

ಬೆಂಗಳೂರು: ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಅವರು ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆಯ ಅಧ್ಯಕ್ಷರಾಗಿ ಭಾನುವಾರ ಅವಿರೋಧವಾಗಿ ಚುನಾಯಿತರಾದರು.

ಸಂಸ್ಥೆಯ ಪದಾಧಿಕಾರಿಗಳನ್ನು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನೂ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ವಿ. ಮುರಳೀಧರ್, ಖಜಾಂಚಿಯಾಗಿ ಜಿ.ಎಂ.ನಿಶ್ಚಿತಾ, ಜಂಟಿ ಕಾರ್ಯದರ್ಶಿಯಾಗಿ ಅನೂಪ್‌ ಶ್ರೀಧರ್‌, ಉಪಾಧ್ಯಕ್ಷರಾಗಿ ಡಾ.ಎಚ್‌.ಅನಿಲ್‌ ಕುಮಾರ್‌, ಬಸವರಾಜ ಎಸ್‌.ಎನ್‌, ಕಿರಣ್ ಬೆಲ್ಲಂ, ಟಿ.ಎಸ್‌.ವಿಶ್ವಾಸ್‌, ಸಿ.ಎಸ್‌. ಮಹೇಶ್‌ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎನ್‌.ಸಿ.ಸುಧೀರ್‌, ಡಾ.ನಿಶಾಂತ್ ಹಿರೇಮಠ ಎಸ್, ವಿಜಯ್‌ ಎನ್‌, ಗುರುಪ್ರಸಾದ್‌, ಹರೀಶ್‌ ಕುಮಾರ್‌ ಬಿ.ಆರ್‌, ಅರವಿಂದ್ ಭಟ್‌, ಆರ್‌. ಅರುಣ್‌, ಸಂತೋಷ್‌ ಕುಮಾರ್‌ ಶೆಟ್ಟಿ, ಆನಂದ್ ಬಿ ಹವನ್ನವರ, ರಾಜೇಶ್‌ ಪಿ. ಆಯ್ಕೆಯಾದರು. 

ADVERTISEMENT
ವಿ. ಮುರಳೀಧರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.