ADVERTISEMENT

ಬ್ಯಾಸ್ಕೆಟ್‌ಬಾಲ್: ಮಂಗಳೂರು ಬಿಸಿ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 16:31 IST
Last Updated 30 ಮಾರ್ಚ್ 2024, 16:31 IST
ಫಿಬಾ ಏಷ್ಯಾ ಅಧ್ಯಕ್ಷ ಕೆ.ಗೋವಿಂದರಾಜ್ ಅವರು ಮಂಗಳೂರು ಬಿಸಿ ತಂಡಕ್ಕೆ ಟ್ರೋಫಿ ವಿತರಿಸಿದರು.  
ಫಿಬಾ ಏಷ್ಯಾ ಅಧ್ಯಕ್ಷ ಕೆ.ಗೋವಿಂದರಾಜ್ ಅವರು ಮಂಗಳೂರು ಬಿಸಿ ತಂಡಕ್ಕೆ ಟ್ರೋಫಿ ವಿತರಿಸಿದರು.     

ಬೆಂಗಳೂರು: ಮಂಗಳೂರು ಬಿಸಿ ತಂಡವು ಕರ್ನಾಟಕ ರಾಜ್ಯ ಗ್ರಾಮೀಣ ಪುರುಷರ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. 

ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಮಂಗಳೂರು ತಂಡವು 81–65 ರಿಂದ ರೈಸಿಂಗ್ ಸ್ಟಾರ್  ಬಿ.ಸಿ. ಮೈಸೂರು ತಂಡವನ್ನು ಮಣಿಸಿತು. ಮಂಗಳೂರು ತಂಡದ ಪರ ಅಶ್ವಿಜ್‌  29, ಗಣೇಶ್ 19 ಪಾಯಿಂಟ್ಸ್ ಗಳಿಸಿದರು. 

ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಆರ್ಯನ್ ಬಿಸಿ ಮೈಸೂರು ತಂಡವು 66–52 ರಿಂದ ಹೊಯ್ಸಳ ಬಿ.ಸಿ. ಹಾಸನ ತಂಡವನ್ನು ಸೋಲಿಸಿತು. 

ADVERTISEMENT

ವಿಜೇತ ತಂಡಕ್ಕೆ ₹50 ಸಾವಿರ, ರನ್ನರ್ ಅಪ್ ತಂಡಕ್ಕೆ ₹ 30 ಸಾವಿರ, ತೃತೀಯ ₹ 20 ಸಾವಿರ, ನಾಲ್ಕನೇ ಸ್ಥಾನಕ್ಕೆ ₹ 10 ಸಾವಿರ ನಗದು ನೀಡಿ ಗೌರವಿಸಲಾಯಿತು. ಟೂರ್ನಿಯ ಉತ್ತಮ ಆಟಗಾರ ಆರ್ಯನ್ ಬಿಸಿ ಮೈಸೂರು ತಂಡದ ಶಕ್ತಿ ಅವರಿಗೆ ₹ 5 ಸಾವಿರ ನಗದು ನೀಡಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.