ADVERTISEMENT

ಈಜು: ಕರ್ನಾಟಕ ತಂಡಕ್ಕೆ ಸಮಗ್ರ ಪ್ರಶಸ್ತಿ

ಸಬ್‌ ಜೂನಿಯರ್‌ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌: ಕೊಯಿಜಮ್ ಶ್ರೇಷ್ಠ ಈಜುಪಟು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 16:22 IST
Last Updated 5 ಆಗಸ್ಟ್ 2025, 16:22 IST
41ನೇ ಸಬ್‌ ಜೂನಿಯರ್‌ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡ ಕರ್ನಾಟಕ ತಂಡ
41ನೇ ಸಬ್‌ ಜೂನಿಯರ್‌ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡ ಕರ್ನಾಟಕ ತಂಡ   

ಬೆಂಗಳೂರು: ಕರ್ನಾಟಕ ತಂಡವು ಬಸವನಗುಡಿ ಈಜು ಕೇಂದ್ರದಲ್ಲಿ ಮಂಗಳವಾರ ಮುಕ್ತಾಯಗೊಂಡ 41ನೇ ಸಬ್‌ ಜೂನಿಯರ್‌ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು. ಆತಿಥೇಯ ತಂಡದ ಈಜುಪಟುಗಳು ಟೂರ್ನಿಯಲ್ಲಿ ಒಟ್ಟು 104 ಅಂಕಗಳನ್ನು ಕಲೆಹಾಕಿದರು.

ಮಣಿಪುರ ತಂಡ 81 ಅಂಕಗಳೊಂದಿಗೆ ರನ್ನರ್ಸ್‌ ಅಪ್‌ ಆಯಿತು. ಈ ತಂಡದ ಕೊಯಿಜಮ್ ಅಥೋಯಿಬಾ ಸಿಂಗ್ ಅವರು 28 ಅಂಕ ಗಳಿಸಿ ಬಾಲಕರ ವಿಭಾಗದ ಶ್ರೇಷ್ಠ ಈಜುಪಟು ಪ್ರಶಸ್ತಿಗೆ ಭಾಜನರಾದರು. ಗೋವಾದ ಪೂರ್ವಿ ರಿತೇಶ್‌ ನಾಯಕ್‌ ಅವರು (19 ಅಂಕ) ಬಾಲಕಿಯರ ವಿಭಾಗದಲ್ಲಿ ಈ ಗೌರವ ಪಡೆದರು.

ಫಲಿತಾಂಶಗಳು ಇಂತಿವೆ:

ADVERTISEMENT

ಬಾಲಕರು: ಮೂರನೇ ಗುಂಪು: 100 ಮೀ. ಬ್ಯಾಕ್‌ಸ್ಟ್ರೋಕ್‌: ಎ.ಪಿ. ಆರ್ಯ ಸತಾರ್‌ (ತಮಿಳುನಾಡು, ಕಾಲ: 1ನಿ.05.53ಸೆ.)–1, ಕೃಷಿವ್‌ ದೋಷಿ (ಮಧ್ಯಪ್ರದೇಶ)–2, ಹೇಮಾಂಶು ನಹಾಕ್‌ಪಮ್‌ (ಮಣಿಪುರ)–3.

100 ಮೀ. ಫ್ರೀಸ್ಟೈಲ್‌: ಕೊಯಿಜಮ್ ಅಥೋಯಿಬಾ ಸಿಂಗ್ (ಮಣಿಪುರ, ಕಾಲ: 58.59ಸೆ)–1, ಹೇಮಾಂಶು ನಹಾಕ್‌ಪಮ್‌ (ಮಣಿಪುರ)–2, ಎ.ಪಿ. ಆರ್ಯ ಸತಾರ್‌ –3.

ಬಾಲಕಿಯರು: 100 ಮೀ. ಬ್ಯಾಕ್‌ಸ್ಟ್ರೋಕ್‌: ಅಲ್ಫಿಯಾ ಎಂ. (ತಮಿಳುನಾಡು, ಕಾಲ: 1ನಿ.10.70ಸೆ.)–1, ಸೆರೆನಾ ಸರೋಹಾ (ಹರಿಯಾಣ)–2, ಅನ್ನಿಕಾ ಗೋಪ್ಲಾನಿ (ಮಹಾರಾಷ್ಟ್ರ)–3.

100 ಮೀ. ಫ್ರೀಸ್ಟೈಲ್‌: ಪೂರ್ವಿ ರಿತೇಶ್‌ ನಾಯಕ್‌ (ಗೋವಾ, ಕಾಲ: 1ನಿ.04.33ಸೆ.)–1, ಸ್ತುತಿ ಸಿಂಗ್‌ (ಕರ್ನಾಟಕ)–2, ಅಮಾತುಲ್ಲಾ ಧೋಲ್ಕಾವಾಲಾ (ಮಹಾರಾಷ್ಟ್ರ)–3.

41ನೇ ಸಬ್‌ ಜೂನಿಯರ್‌ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಬಾಲಕಿಯರ ವಿಭಾಗದ ಶ್ರೇಷ್ಠ ಈಜುಪಟು ಪ್ರಶಸ್ತಿ ಗೆದ್ದುಕೊಂಡ ಗೋವಾದ ಪೂರ್ವಿ ರಿತೇಶ್‌ ನಾಯಕ್‌
41ನೇ ಸಬ್‌ ಜೂನಿಯರ್‌ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಬಾಲಕರ ವಿಭಾಗದ ಶ್ರೇಷ್ಠ ಈಜುಪಟು ಪ್ರಶಸ್ತಿ ಗೆದ್ದುಕೊಂಡ ಮಣಿಪುರದ ಕೊಯಿಜಮ್ ಅಥೋಯಿಬಾ ಸಿಂಗ್

Highlights - ವಾಟರ್‌ಪೊಲೊ: ಕರ್ನಾಟಕಕ್ಕೆ ಸುಲಭ ಜಯ ಕರ್ನಾಟಕ ತಂಡ, ಹಲಸೂರಿನ ಕೆನ್ಸಿಂಗ್ಟನ್‌ ಕೊಳದಲ್ಲಿ ನಡೆಯುತ್ತಿರುವ 51ನೇ ಜೂನಿಯರ್ ವಾಟರ್‌ಪೊಲೊ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಹರಿಯಾಣ ತಂಡವನ್ನು 12–2 ಅಂತರದಿಂದ ಸುಲಭವಾಗಿ ಸೋಲಿಸಿತು. ಇನ್ನೊಂದು ಏಕಪಕ್ಷೀಯ ಪಂದ್ಯದಲ್ಲಿ ಕೇರಳ 14–1 ಗೋಲುಗಳಿಂದ ತಮಿಳುನಾಡು ತಂಡವನ್ನು ಸದೆಬಡಿಯಿತು. ನವನೀತ್ ಎಸ್‌. ಮೂರು ಗೋಲುಗಳನ್ನು ಗಳಿಸಿದರು. ಮಹಾರಾಷ್ಟ್ರ 18–1 ರಿಂದ ಆಂಧ್ರಪ್ರದೇಶ ತಂಡವನ್ನು,  ಒಡಿಶಾ 17–3 ರಿಂದ ಮಣಿಪುರ ತಂಡವನ್ನು, ಬಂಗಳಾ 12–4 ರಿಂದ ಪಂಜಾಬ್ ತಂಡವನ್ನು ಸೋಲಿಸಿದವು. ಮಹಿಳೆಯರ ವಿಭಾಗದಲ್ಲಿ ಕರ್ನಾಟಕ 9–0 ಯಿಂದ ಅಸ್ಸಾಂ ವಿರುದ್ಧ, ಒಡಿಶಾ 6–4 ರಿಂದ ಬಂಗಾಳ ವಿರುದ್ಧ, ಮಹಾರಾಷ್ಟ್ರ 9–1 ರಿಂದ ತಮಿಳುನಾಡು ವಿರುದ್ಧ ಜಯಗಳಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.