ADVERTISEMENT

ಕುಸ್ತಿ ಹಬ್ಬ :26 ಸೆಕೆಂಡುಗಳಲ್ಲೇ ಚಿತ್ ಮಾಡಿದ ಐಶ್ವರ್ಯಾ ದಳವಾಯಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 20:15 IST
Last Updated 22 ಫೆಬ್ರುವರಿ 2020, 20:15 IST
ಕರ್ನಾಟಕ ಕುಸ್ತಿ ಹಬ್ಬದ ಮೊದಲ ಪಂದ್ಯದಲ್ಲಿ ಶನಿವಾರ ಪ್ರಿಯಾಂಕಾ ರೇವಣಕರ (ಕೆಂಪು) ಅವರನ್ನು ಚಿತ್ ಮಾಡಿದ ಐಶ್ವರ್ಯಾ ದಳವಾಯಿ (ನೀಲಿ) ಪ್ರಜಾವಾಣಿ ಚಿತ್ರ/ಬಿ.ಎಂ. ಕೇದಾರನಾಥ
ಕರ್ನಾಟಕ ಕುಸ್ತಿ ಹಬ್ಬದ ಮೊದಲ ಪಂದ್ಯದಲ್ಲಿ ಶನಿವಾರ ಪ್ರಿಯಾಂಕಾ ರೇವಣಕರ (ಕೆಂಪು) ಅವರನ್ನು ಚಿತ್ ಮಾಡಿದ ಐಶ್ವರ್ಯಾ ದಳವಾಯಿ (ನೀಲಿ) ಪ್ರಜಾವಾಣಿ ಚಿತ್ರ/ಬಿ.ಎಂ. ಕೇದಾರನಾಥ   

ಧಾರವಾಡ: ಕರ್ನಾಟಕ ಕುಸ್ತಿ ಹಬ್ಬದ ಉದ್ಘಾಟನಾ ಪಂದ್ಯದಲ್ಲಿ ಬೆಳಗಾವಿಯ ಐಶ್ವರ್ಯಾ ದಳವಾಯಿ ಕೇವಲ 26 ಸೆಕೆಂಡುಗಳಲ್ಲಿ ಆಳ್ವಾಸ್‌ನ ಪ್ರಿಯಾಂಕಾ ರೇವಣಕರ್ ಅವರನ್ನು ಚಿತ್ ಮಾಡಿ, ಕುಸ್ತಿಪ್ರಿಯರನ್ನು ಬೆರಗುಗೊಳಿಸಿದರು.

ಶನಿವಾರ ಆರಂಭವಾದ ಕುಸ್ತಿ ಹಬ್ಬದಲ್ಲಿ 76 ಕೆ.ಜಿ. ವಿಭಾಗದಲ್ಲಿ ಪ್ರಿಯಾಂಕಾ ಮತ್ತು ಐಶ್ವರ್ಯ ಅವರ ಪಂದ್ಯಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹಾಗೂ ಶಾಸಕರಾದ ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ ಚಾಲನೆ ನೀಡಿದರು.

ಏಷ್ಯನ್‌ ಕ್ರೀಡಾಕೂಟದಲ್ಲಿ ಆಡಿದ ಅನುಭವ ಹೊಂದಿರುವ ಐಶ್ವರ್ಯಾ ತಮ್ಮ ಪೂರ್ಣಶಕ್ತಿ ಪ್ರಯೋಗಿಸಿ ಪ್ರಿಯಾಂಕಾ ಅವರನ್ನು ಸೋಲಿಸಿದರು.

ADVERTISEMENT

50 ಕೆ.ಜಿ. ವಿಭಾಗದ ಪಂದ್ಯದಲ್ಲಿ ನಂದಿನಿ ಎದುರು ಮಮತಾ ಕಲೋಜಿ ಜಯಗಳಿಸಿದರು. 52 ಕೆ.ಜಿ. ವಿಭಾಗದಲ್ಲಿ ರಂಜಿತಾ ರಾಮನಗರ ಹಾಗೂ ಸೋನಿಯಾ ಜಾಧವ ನಡುವಿನ ಪಂದ್ಯದಲ್ಲಿ ಸೋನಿಯಾ ಆರು ಅಂಕ ಪಡೆದು ಗೆಲುವು ತಮ್ಮದಾಗಿಸಿಕೊಂಡರು. ಇನ್ನೂ ಮೂರು ದಿನ ನಡೆಯಲಿರುವ ಕುಸ್ತಿ ಹಬ್ಬದಲ್ಲಿ 1,270 ಪೈಲ್ವಾನರು ಹೆಸರು ನೋಂದಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.