ADVERTISEMENT

ರಾಷ್ಟ್ರೀಯ ನೆಟ್‌ಬಾಲ್‌: ಕರ್ನಾಟಕ ಮಹಿಳೆಯರಿಗೆ ಕಂಚು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2022, 15:55 IST
Last Updated 3 ಏಪ್ರಿಲ್ 2022, 15:55 IST
ಕಂಚು ಗೆದ್ದ ಕರ್ನಾಟಕ ಮಹಿಳೆಯರ ನೆಟ್‌ಬಾಲ್ ತಂಡಕ್ಕೆ ಒಲಿಂಪಿಯನ್‌ ಕುಸ್ತಿಪಟು ಯೋಗೇಶ್ವರ್‌ ದತ್ ಟ್ರೋಫಿ ವಿತರಿಸಿದರು. ಈ ವೇಳೆ ಎಡದಿಂದ (ನಿಂತವರು) ಹರಿಯಾಣದ ಹಿಸಾರ್ ಜಿಲ್ಲೆ ನೆಟ್‌ಬಾಲ್ ಸಂಸ್ಥೆಯ ಅಧ್ಯಕ್ಷೆ ಗೀತಾ, ಎನ್‌ಎಫ್‌ಐ ತಾಂತ್ರಿಕ ಸಮಿತಿ ಸಂಚಾಲಕ ಅಮಿತ್ ಅರೋರಾ, ಅಂಪೈರ್ ಮಂಡಳಿ ಸಂಚಾಲಕ ಅಶೋಕ್ ಕುಮಾರ್, ರಂಜಿತಾ ಬಿ. ರಾಜ್‌ (ನಾಯಕಿ), ಎನ್‌ಎಫ್‌ಐ ಪ್ರಧಾನ ಕಾರ್ಯದರ್ಶಿ ವಿಜೇಂದರ್ ಸಿಂಗ್‌, ಕರ್ನಾಟಕ ನೆಟ್‌ಬಾಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಸಿ, ಗಗನಾ ಕೆ. ಆರ್‌, ಸೃಷ್ಟಿ, ಸೋನಾಲಿ ಎಲ್‌. (ಕುಳಿತವರು) ದೀಕ್ಷಾಂಜಲಿ, ಮೇಘನಾ, ಪ್ರಿಯಾಂಕಾ, ಸ್ವಾತಿ, ಮಹಾಲಕ್ಷ್ಮಿ, ಮಹೇಶ್ವರಿ, ಶಿವಲೀಲಾ (ಉಪನಾಯಕಿ) ಮತ್ತು ಸುರಭಿ ಬಿ.ಆರ್. ಇದ್ದರು.

ಬೆಂಗಳೂರು: ಕರ್ನಾಟಕ ಮಹಿಳೆಯರ ತಂಡವು ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದೆ.

ಹರಿಯಾಣದ ಭಿವಾನಿಯಲ್ಲಿ ಭಾನುವಾರ ಕೊನೆಗೊಂಡ ಟೂರ್ನಿಯ ಸೆಮಿಫೈನಲ್‌ನಲ್ಲಿ ರಾಜ್ಯದ ಮಹಿಳೆಯರ ತಂಡವು 21–30ರಿಂದ ದೆಹಲಿ ತಂಡಕ್ಕೆ ಸೋತಿತು.

ಕ್ವಾರ್ಟರ್‌ಫೈನಲ್‌ನಲ್ಲಿ ಕರ್ನಾಟಕದ ಮಹಿಳೆಯರು 32–19ರಿಂದ ತೆಲಂಗಾಣ ಎದುರು ಗೆದ್ದಿದ್ದರು.

ADVERTISEMENT

ಕರ್ನಾಟಕ ತಂಡವು ಫೆಡರೇಷನ್ ಕಪ್ ಟೂರ್ನಿಗೆ ಅರ್ಹತೆ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.