ADVERTISEMENT

ಕರ್ನಾಟಕ ಕುಸ್ತಿ ಹಬ್ಬ 1ರಿಂದ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 22:30 IST
Last Updated 25 ಫೆಬ್ರುವರಿ 2023, 22:30 IST
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿ ರಘುನಂದನಮೂರ್ತಿ ಅವರು ‘ಕರ್ನಾಟಕ ಕುಸ್ತಿ ಹಬ್ಬ–2023’ ಪೋಸ್ಟರ್‌ ಬಿಡುಗಡೆ ಮಾಡಿದರು. ಸಿಇಒ ಅಕ್ಷಯ ಶ್ರೀಧರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ರಮೇಶ ಇದ್ದಾರೆ
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿ ರಘುನಂದನಮೂರ್ತಿ ಅವರು ‘ಕರ್ನಾಟಕ ಕುಸ್ತಿ ಹಬ್ಬ–2023’ ಪೋಸ್ಟರ್‌ ಬಿಡುಗಡೆ ಮಾಡಿದರು. ಸಿಇಒ ಅಕ್ಷಯ ಶ್ರೀಧರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ರಮೇಶ ಇದ್ದಾರೆ   

ಹಾವೇರಿ: ಗ್ರಾಮೀಣ ಕ್ರೀಡಾ ಕುಸ್ತಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ತೃತೀಯ ‘ಕರ್ನಾಟಕ ಕುಸ್ತಿ ಹಬ್ಬ’ವನ್ನು ಮಾರ್ಚ್ 1ರಿಂದ 5ರವರೆಗೆ ಐದು ದಿನ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಶ್ರೀರಂಭಾಪುರಿ ಜಗದ್ಗುರು ವಾಣಿಜ್ಯ ಮಹಾವಿದ್ಯಾಲಯದ ಮೈದಾನ ದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.

ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘದ ಆಶ್ರಯದಲ್ಲಿ ರಾಜ್ಯಮಟ್ಟದ ಕುಸ್ತಿ ಏರ್ಪಡಿಸಲಾಗಿದೆ. ಅಂಕಗಳ ಆಧಾರದಲ್ಲಿ ಮಣ್ಣಿನ ಮೇಲೆ ಕುಸ್ತಿಯನ್ನು ನಡೆಸಲಾಗುವುದು. ಎಂಟು ವಿಭಾಗಗಳಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಪಂದ್ಯಗಳು ಜರುಗಲಿವೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

₹1.37 ಕೋಟಿ ಬಹುಮಾನ: ಕುಸ್ತಿ ಹಬ್ಬದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು, ಸರ್ಕಾರ ₹3 ಕೋಟಿ ಮೀಸಲಿಟ್ಟಿದೆ. ಕುಸ್ತಿಪಟುಗಳಿಗೆ ಬಹುಮಾನ ಮೊತ್ತವಾಗಿ ಒಟ್ಟು ₹1.37 ಕೋಟಿ ನೀಡಲಾಗುವುದು. ‘ಬಾಲಕೇಸರಿ’ ಪ್ರಶಸ್ತಿಗೆ ₹75 ಸಾವಿರ, ‘ಕರ್ನಾಟಕ ಕಿಶೋರ, ಕಿಶೋರಿ’ ಪ್ರಶಸ್ತಿಗೆ ₹1 ಲಕ್ಷ, ‘ಕರ್ನಾಟಕ ಕುಮಾರ ಹಾಗೂ ಕುಮಾರಿ’ ಪ್ರಶಸ್ತಿಗೆ ₹2 ಲಕ್ಷ ಹಾಗೂ ‘ಕರ್ನಾಟಕ ಕೇಸರಿ‍’ ಪ್ರಶಸ್ತಿಗೆ ₹4.50 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.