ಮುಂಬೈ: ಕರ್ನಾಟಕದ ಬಾಲಕಿ ಅವನಿ ಆಚಾರ್ಯ ಉಡುಪಿ ಅವರು ಅಖಿಲ ಭಾರತ ಚೆಸ್ ಮಾಸ್ಟರ್ಸ್ ಫಿಡೆ ರೇಟೆಡ್ ಕ್ಲಾಸಿಕಲ್ ಚೆಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಶನಿವಾರ ಮುಕ್ತಾಯಗೊಂಡ ಈ ಟೂರ್ನಿಯಲ್ಲಿ ಅವನಿ ಎಂಟು ಸುತ್ತುಗಳಿಂದ ಏಳು ಪಾಯಿಂಟ್ಸ್ ಸಂಗ್ರಹಿಸಿ ಅಜೇಯರಾಗುಳಿದರು.
ಮಹಾರಾಷ್ಟ್ರದ ಮಯೂರೇಶ್ ಪಾರ್ಕರ್ ಕೂಡ ಏಳು ಅಂಕ ಸಂಗ್ರಹಿಸಿದರೂ ಕಡಿಮೆ ಟೈಬ್ರೇಕ್‌ನಿಂದಾಗಿ ಎರಡನೇ ಸ್ಥಾನ ಪಡೆಯಬೇಕಾಯಿತು. ಅವನಿ 36.5 ಮತ್ತು ಮಯೂರೇಶ್ 32 ಟೈಬ್ರೇಕ್ ಅಂಕ ಹೊಂದಿದ್ದರು. ವೆಂಕಟ್ ರಾಯಾನ್ಶ್ (6.5), ಯಶ್ ಕಪಾಡಿ (6.5), ದರ್ಶ್ ಶೆಟ್ಟಿ (6.5) ಕ್ರಮವಾಗಿ ಮೂರರದಿಂದ ಐದವರೆಗಿನ ಸ್ಥಾನ ಪಡೆದರು.
1669ರ ರೇಟಿಂಗ್ ಹೊಂದಿರುವ 20 ವರ್ಷ ವಯಸ್ಸಿಮ ಅವನಿ ₹30,000 ಬಹುಮಾನ ಪಡೆದರೆ, ಮಯೂರೇಶ್ ₹20,000 ಬಹುಮಾನ ಪಡೆದರು.
ಕೊನೆಯ ಸುತ್ತಿನಲ್ಲಿ ಅವನಿ, ದರ್ಶ್ ಶೆಟ್ಟಿ ವಿರುದ್ಧ ಜಯಗಳಿಸಿದರೆ, ಮಯೂರೇಶ್, ಯಶ್ ಕಪಾಡಿ ವಿರುದ್ಧ ಗೆಲುವು ಸಾಧಿಸಿದರು. ವೆಂಕಟ್ ರಾಯಾನ್ಶ್, ಓಂ ಗಾಡಾ (6.5) ಜೊತೆ ಡ್ರಾ ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.