ADVERTISEMENT

ಕಬಡ್ಡಿ: ಬೆಂಗಳೂರು ಶುಭಾರಂಭ

ಕೇಂದ್ರೀಯ ವಿದ್ಯಾಲಯಗಳ ರಾಷ್ಟ್ರೀಯ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 16:00 IST
Last Updated 2 ಆಗಸ್ಟ್ 2025, 16:00 IST
ಕೇಂದ್ರೀಯ ವಿದ್ಯಾಲಯಗಳ 54ನೇ ರಾಷ್ಟ್ರೀಯ ಕ್ರೀಡಾಕೂಟದ 14 ವರ್ಷದೊಳಗಿನವರ ಬಾಲಕಿಯರ ಕಬಡ್ಡಿಯ ಉದ್ಘಾಟನಾ ಪಂದ್ಯದಲ್ಲಿ ಭೋಪಾಲ್‌ (ಗುಲಾಬಿ) ತಂಡದ ಆಟಗಾರ್ತಿಯರು ಲಖನೌ ತಂಡದ ರೈಡರ್‌ ಅನ್ನು ಹಿಡಿದೆಳೆದರು –ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್.
ಕೇಂದ್ರೀಯ ವಿದ್ಯಾಲಯಗಳ 54ನೇ ರಾಷ್ಟ್ರೀಯ ಕ್ರೀಡಾಕೂಟದ 14 ವರ್ಷದೊಳಗಿನವರ ಬಾಲಕಿಯರ ಕಬಡ್ಡಿಯ ಉದ್ಘಾಟನಾ ಪಂದ್ಯದಲ್ಲಿ ಭೋಪಾಲ್‌ (ಗುಲಾಬಿ) ತಂಡದ ಆಟಗಾರ್ತಿಯರು ಲಖನೌ ತಂಡದ ರೈಡರ್‌ ಅನ್ನು ಹಿಡಿದೆಳೆದರು –ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್.   

ಬೆಂಗಳೂರು: ನಗರದಲ್ಲಿ ಶನಿವಾರ ಆರಂಭಗೊಂಡ ಕೇಂದ್ರೀಯ ವಿದ್ಯಾಲಯಗಳ ರಾಷ್ಟ್ರೀಯ ಕ್ರೀಡಾಕೂಟದ 14 ವರ್ಷದೊಳಗಿನವರ ಬಾಲಕಿಯರ ಕಬಡ್ಡಿಯಲ್ಲಿ ಬೆಂಗಳೂರು ತಂಡವು ಶುಭಾರಂಭ ಮಾಡಿತು.

ಕೇಂದ್ರೀಯ ವಿದ್ಯಾಲಯಗಳ ಸಂಘಟನೆಯ ಆಶ್ರಯದಲ್ಲಿ ನಗರದ ಕೇಂದ್ರೀಯ ವಿದ್ಯಾಲಯ ಹೆಬ್ಬಾಳದಲ್ಲಿ ನಡೆದ ಲೀಗ್‌ ಹಂತದ ಪಂದ್ಯದಲ್ಲಿ ಬೆಂಗಳೂರು ತಂಡವು 34–23 ಅಂಕಗಳಿಂದ ಎರ್ನಾಕುಳಂ ತಂಡದ ವಿರುದ್ಧ ಗೆಲುವು ಸಾಧಿಸಿತು.

ಇತರ ಫಲಿತಾಂಶ: ಲಖನೌ ತಂಡ 25–19 ರಿಂದ ಭೋಪಾಲ್‌ ವಿರುದ್ಧ; ಜಬಲ್‌ಪುರ 38–10ರಿಂದ ಭುವನೇಶ್ವರ ವಿರುದ್ಧ; ಚೆನ್ನೈ 27– 15 ಕೋಲ್ಕತ್ತ ವಿರುದ್ಧ; ರಾಂಚಿ 32–19ರಿಂದ ಚಂಡೀಗಢ ವಿರುದ್ಧ; ಮುಂಬೈ 23–20ರಿಂದ ಜಮ್ಮು ವಿರುದ್ಧ; ಡೆಹ್ರಾಡೂನ್‌ 27–23ರಿಂದ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿದವು.

ADVERTISEMENT

ಪಟ್ನಾ ತಂಡ 44–28ರಿಂದ ವಾರಣಾಸಿ ಎದುರು; ಲಖನೌ 29–22ರಿಂದ ಜಯ್‌ಪುರ ಎದುರು;‌ ದೆಹಲಿ 39–18ರಿಂದ ಜಬಲ್‌ಪುರ ಎದುರು; ಚೆನ್ನೈ 36–10ರಿಂದ ಅಹಮ್ಮದಾಬಾದ್‌ ಎದುರು; ಆಗ್ರಾ 35–18ರಿಂದ ಗುವಾಹಟಿ ಎದುರು; ಮುಂಬೈ 18–17ರಿಂದ ಭೋಪಾಲ್‌ ಎದುರು ಜಯ ಸಾಧಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.